ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ಸಂಘ ಅಧ್ಯಕ್ಷ ಬಿ.ಡಿ. ಪುರುಷೋತ್ತಮ ಅಧ್ಯಕ್ಷತೆಯಲ್ಲಿ ನಡೆದ ಆಡಳಿತಮಂಡಳಿಯ ತುರ್ತು ಸಭೆ ನಡೆಯಿತು.
ಮಂಡ್ಯದ ಅಶೋಕ್ ನಗರದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ವೃತ್ತಿಪರ ನಿರ್ದೇಶಕರನ್ನಾಗಿ ಬೇಲೂರು ಬಿ.ಡಿ. ಪುಟ್ಟಸ್ವಾಮಿ ಮತ್ತು ಶ್ರೀರಂಗಪಟ್ಟಣ ಸೋಮಸುಂದರ್ ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಿದರು.
ಮಂಗಳೂರು- 3,700 ಕೋಟಿ ರು ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಸಭೆಯಲ್ಲಿ ಮಾತನಾಡಿದ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಬೇಲೂರು ಸೋಮಶೇಖರ್ ಅವರು, ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ಸಂಘದ ಆಡಳಿತ ಮಂಡಳಿಯಲ್ಲಿ ಪ್ರಸ್ತುತ 17 ಮಂದಿ ಚುನಾಯಿತ ನಿರ್ದೇಶಕರಿದ್ದಾರೆ.
ಖಾಲಿ ಇದ್ದ ವೃತ್ತಿಪರ ನಿರ್ದೇಶಕ ಸ್ಥಾನಗಳ ಭರ್ತಿಗಾಗಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಕರೆದು ನೇಮಕ ಪ್ರಕ್ರಿಯೆ ನಡೆಯಿತು ಎಂದು ಹೇಳಿದರು.
ವೃತ್ತಿಪರ ನಿರ್ದೇಶಕರನ್ನಾಗಿ ಬೇಲೂರು ಬಿ.ಡಿ. ಪುಟ್ಟಸ್ವಾಮಿ ಮತ್ತು ಶ್ರೀರಂಗಪಟ್ಟಣ ಸೋಮಸುಂದರ್ ಅವರನ್ನು ಆಡಳಿತ ಮಂಡಳಿಯು ಒಮ್ಮತದಿಂದ ನೇಮಕಮಾಡಿದೆ, ಸಂಘದ ಅಭಿವೃದ್ಧಿ ಮತ್ತು ಹಿತಕ್ಕಾಗಿ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ಸಂಘ ಅಧ್ಯಕ್ಷ ಬಿ.ಡಿ. ಪುರುಷೋತ್ತಮ, ನಿರ್ದೇಶಕರಾದ ನಾಗೇಂದ್ರ, ರಮೇಶ್, ದೇವಾಜು ಮತ್ತು ಚುನಾಯಿತ ನಿರ್ದೇಶಕರು ಉಪಸ್ಥಿತರಿದ್ದರು.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ