November 16, 2024

Newsnap Kannada

The World at your finger tips!

politics

ಬಿಜೆಪಿಗೆ ಹೊಸ ಪದಾಧಿಕಾರಿಗಳ ನೇಮಕ -ಸಿ.ಟಿ. ರವಿ ಔಟ್ : ನಡ್ಡಾ ತಂಡದಿಂದ ಶಾಕ್

Spread the love

ರವಿಗೆ ‘ರಾಜಯೋಗ’ : ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಾಧ್ಯತೆ

ನವದೆಹಲಿ : ಮುಂದಿನ ವಾರವೇ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ‌ನಾಯಕನ ಆಯ್ಕೆ ಆಖೈರು ಮಾಡಲಿರುವ ಬಿಜೆಪಿ ಹೈಕಮಾಂಡ್ ಈಗಾಗಲೇ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯ ಸಂಗ್ರಹಿಸಿದೆ

ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಜಾತಿ ಲೆಕ್ಕಾಚಾರದಲ್ಲಿ ಪ್ರತಿಪಕ್ಷ ಹಾಗು ರಾಜ್ಯಾಧ್ಯಕ್ಷರ ನೇಮಕ ಮಾಡಲಾಗುತ್ತದೆ. ಸಿ ಟಿ ರವಿಗೆ ರಾಜ್ಯಾಧ್ಯಕ್ಷರಾಗುವ ‘ರಾಜಯೋಗ’ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ

ಕೇಂದ್ರ ಬಿಜೆಪಿ ಸಂಘಟನೆಯಲ್ಲೂ ಬಿಜೆಪಿ ವರಿಷ್ಠರು ಕೆಲವು ಬದಲಾವಣೆ ತಂದಿದ್ದಾರೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹೊಸಬರನ್ನು ನೇಮಕ ಮಾಡಲಾಗಿದೆ.

ಚಿಕ್ಕಮಗಳೂರಿನ ಮಾಜಿ ಶಾಸಕ ಸಿ.ಟಿ. ರವಿ ಹೆಸರನ್ನು ಜೆ.ಪಿ. ನಡ್ಡಾ ಹಾಗೂ ತಂಡ ಕೈ ಬಿಟ್ಟಿದೆ. ಮಹಾರಾಷ್ಟ್ರ, ಗೋವಾ , ತಮಿಳುನಾಡು ಉಸ್ತುವಾರಿಯಾಗಿದ್ದ ಸಿ.ಟಿ. ರವಿ ಇನ್ನು ಮುಂದೆ ಆ ಸ್ಥಾನದಲ್ಲಿ ಮುಂದುವರೆಯುವುದಿಲ್ಲ. ಇದಕ್ಕೆ ಅವರ ಅನಾರೋಗ್ಯ ಕಾರಣವೋ ಅಥವಾ ಚುನಾವಣೆಯಲ್ಲಿ ಸೋತದ್ದು ಕಾರಣವೋ ಅದು ಬಿಜೆಪಿಯ ವರಿಷ್ಟರಿಗಷ್ಟೇ ಗೊತ್ತು

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಲ್. ಸಂತೋಷ್​ರನ್ನೇ ಮುಂದುವರಿಸಲಾಗಿದೆ ಬಿಜೆಪಿ ಇಡೀ ರಾಷ್ಟ್ರೀಯ ಸಂಘಟನೆಯಲ್ಲಿ ಬಿಎಲ್ ಸಂತೋಷ್ ಬಿಟ್ಟರೆ ಬೇರೆ ಇನ್ಯಾರೂ ಕನ್ನಡಿಗರನ್ನು ಸೇರ್ಪಡೆ ಮಾಡಲಾಗಿಲ್ಲ. ಅವರನ್ನು ರಾಷ್ಟ್ರೀಯ ಸಂಘಟನ್ ಮಹಾಮಂತ್ರಿಯನ್ನಾಗಿ ನೇಮಿಸಲಾಗಿದೆ. ತಮಿಳುನಾಡು : ಪಟಾಕಿ ಗೋದಾಮು ಸ್ಪೋಟ – 9ಮಂದಿ ದುರ್ಮರಣ

ರಾಷ್ಟ್ರೀಯ ಸಹ ಸಂಘಟನ ಮಹಾಮಂತ್ರಿಯನ್ನಾಗಿ ಶಿವ ಪ್ರಕಾಶ್​ರನ್ನು ನೇಮಿಸಲಾಗಿದೆ.

ಬಿಜೆಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು 13 ಜನರನ್ನು ನೇಮಕ ಮಾಡಲಾಗಿದೆ ಅವರಲ್ಲಿ ಶಾಸಕರಾದ ವಸುಂಧರಾ ರಾಜೆ ಕೂಡ ಒಬ್ಬರು. ಇನ್ನುಳಿದವರು ಬೇರೆ ಬೇರೆ ರಾಜ್ಯದ ಶಾಸಕರು ಹಾಗೂ ಸಂಸದರಾಗಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 4 ಜನರು ಮಹಿಳೆಯರೇ ಇರುವುದೂ ವಿಶೇಷವಾಗಿದೆ. ರಾಹುಲ್ ಗಾಂಧಿ ಮದುವೆ ಯಾವಾಗ ? ಸೋನಿಯಾ ಉತ್ತರ ಸೋಜಿಗ !

ಬಿಜೆಪಿಯ ರಾಷ್ಟ್ರೀಯ ಮಹಾಮಂತ್ರಿ ಸ್ಥಾನದಲ್ಲಿ, ಬಿಜೆಪಿ ಪ್ರಮುಖರಾದ ಅರುಣ್ ಸಿಂಗ್, ವಿನೋದ್ ತಾವಡೆ ಮುಂತಾದವರು ಇದ್ದಾರೆ. ಅದೇ ರೀತಿ 13 ಜನ ರಾಷ್ಟ್ರೀಯ ಸಚಿವರನ್ನು ನೇಮಿಸಲಾಗಿದೆ ಕೋಶಾಧ್ಯಕ್ಷರು ಹಾಗೂ ಸಹ ಕೋಶಾಧ್ಯಕ್ಷರನ್ನು ನೇಮಿಸಲಾಗಿದೆ.

WhatsApp Image 2023 07 21 at 9.21.33 PM
Copyright © All rights reserved Newsnap | Newsever by AF themes.
error: Content is protected !!