ಒಂದೇ ದಿನ 17 ಡಿವೈಎಸ್ಪಿ ವರ್ಗಾವಣೆ -ಕರ್ನಾಟಕ ಲೋಕಾಯುಕ್ತಕ್ಕೆ ಮತ್ತಷ್ಟು ಬಲ

Team Newsnap
1 Min Read

ACB ರದ್ದುಪಡಿಸಿ, ಕರ್ನಾಟಕ ಲೋಕಾಯುಕ್ತಕ್ಕೆ ಹೈಕೋರ್ಟ್ ಆದೇಶಿಸಿತ್ತು.ಈಗಾಗಲೇ ಲೋಕಾಯುಕ್ತಕ್ಕೆ ಬಲ ನೀಡಿರುವಂತ ಸರ್ಕಾರ, ಒಂದೇ ದಿನ 17 ಡಿವೈಎಸ್ಪಿ ನೇಮಕ ಮಾಡಿ ಆದೇಶಿಸುವ ಮೂಲಕ ಮತ್ತಷ್ಟು ಬಲ ನೀಡಿದೆ.

ಆದೇಶ ಹೊರಡಿಸಿರುವಂತ ರಾಜ್ಯ ಸರ್ಕಾರವು, 17 ಸಿವಿಲ್ ಡಿವೈಎಸ್ಪಿ ಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ನೇಮಕ ಮಾಡಿದೆ. ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಆದೇಶ ಹೊರಡಿಸಿದೆ.

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿರುವಂತ ಬಹುತೇಕ ಡಿವೈಎಸ್ಪಿ ಗಳು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಇದ್ದಂತವರು ಆಗಿದ್ದಾರೆ. ACB ರದ್ದು ಪಡಿಸಿದ ಬಳಿಕ, ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡ 17 ಡಿವೈಎಸ್ಪಿಗಳ ಪಟ್ಟಿ

WhatsApp Image 2022 12 19 at 11.55.56 PM
WhatsApp Image 2022 12 19 at 11.55.56 PM 1
Share This Article
Leave a comment