December 23, 2024

Newsnap Kannada

The World at your finger tips!

airhosters

ಬೆಂಗಳೂರಿನಲ್ಲಿ ಗಗನಸಖಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

ಏರ್​ ಇಂಡಿಯಾ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಕ್ಯಾಬಿನ್ ಕ್ರ್ಯೂ ಅಥವಾ ಗಗನಸಖಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಗಸ್ಟ್ 11, 2023ರಂದು ಬೆಂಗಳೂರಿನಲ್ಲಿ ಬೆಳಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ ಸಂದರ್ಶನ ನಡೆಯಲಿದೆ.

ಸೂಚನೆ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.ಈ ಉದ್ಯೋಗ ಮಹಿಳೆಯರಿಗೆ ಮಾತ್ರ.

ಹುದ್ದೆ: ಕ್ಯಾಬಿನ್ ಸಿಬ್ಬಂದಿ (ಮಹಿಳೆ)
ಸ್ಥಳ: ಬೆಂಗಳೂರು
ಪ್ರಕ್ರಿಯೆಯ ದಿನಾಂಕ: 11ನೇ ಆಗಸ್ಟ್, 2023
ನೇಮಕಾತಿ ವಿಧಾನ: ವಾಕ್-ಇನ್ ಇಂಟರ್‌ವ್ಯೂ

ಅರ್ಹತೆಯ ಮಾನದಂಡ

ಭಾರತೀಯ ಪ್ರಜೆಯಾಗಿರಬೇಕು, ಭಾರತೀಯ ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು.
ಫ್ರೆಶರ್‌ಗಳಿಗೆ 18-27 ವರ್ಷ ವಯಸ್ಸಿನ ನಡುವೆ ಮತ್ತು ಅನುಭವಿ ಸಿಬ್ಬಂದಿಗೆ 35 ವರ್ಷ ದವರೆಗೆ.
ಕನಿಷ್ಠ ಶೈಕ್ಷಣಿಕ ಅರ್ಹತೆ: ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿ / ವಿಶ್ವವಿದ್ಯಾಲಯದಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಅಗತ್ಯವಿರುವ ಕನಿಷ್ಠ ಎತ್ತರ: ಮಹಿಳೆ – 155 ಸೆಂ.ಮೀ.
ತೂಕ: ಎತ್ತರಕ್ಕೆ ಅನುಗುಣವಾಗಿ.
BMI ಶ್ರೇಣಿ: ಮಹಿಳಾ ಅಭ್ಯರ್ಥಿಗಳು – 18 ರಿಂದ 22.
ಸಮವಸ್ತ್ರ ಧರಿಬೇಕು, ಯಾವುದೇ ಗೋಚರಿಸುವ ಟ್ಯಾಟೂ ಇರಬಾರದು
ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಬೇಕು
ದೃಷ್ಟಿ 6/6.

ಸಂದರ್ಶನದ ಸ್ಥಳ:
ಫಾರ್ಚೂನ್ ಸೆಲೆಕ್ಟ್ JP ಕಾಸ್ಮೋಸ್‌, 49, ಕನ್ನಿಂಗ್‌ಹ್ಯಾಮ್‌ ಕ್ರೆಸೆಂಟ್ ರಸ್ತೆ, ಫೋರ್ಟಿಸ್ ಆಸ್ಪತ್ರೆಯ ಹಿಂದೆ,
ಬೆಂಗಳೂರು 560052.

Copyright © All rights reserved Newsnap | Newsever by AF themes.
error: Content is protected !!