ಐಫೋನ್-12 ಫೋನ್‌ಗಳನ್ನು ಪ್ರಸ್ತುತ ಪಡಿಸಿದ ಬೆನ್ನಲ್ಲೇ ಆ್ಯಪಲ್‌ನ ಮಾರಕಟ್ಟೆ ಕುಸಿತ

Team Newsnap
1 Min Read

ನಿನ್ನೆ ಆ್ಯಪಲ್ ಕಂಪನಿಯು ಮುಂಬರುವ ಭವಿಷ್ಯತ್ತಿಗೋಸ್ಕರ 5-G ಗೆ ಹೊಂದಬಲ್ಲ ಐಫೋನ್ -12 ಮಾದರಿಯ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಬೆನ್ನಲ್ಲೇ 81 ಬಿಲಿಯನ್ ಡಾಲರ್‌ಗಳ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ.

ಆ್ಯಪಲ್ ಸಂಸ್ಥೆಯು ಐಫೋನ್ 12, ಐಫೋನ್ 12 ಮಿನಿ, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಎಂಬ ಒಟ್ಟು ನಾಲ್ಕು ಐಫೋನ್ ಮಾದರಿಗಳ ಜೊತೆಗೆ, ಸಂಸ್ಥೆಯು ತನ್ನ ಹೋಮ್‌ಪಾಡ್ ಮಿನಿ ಹೋಮ್ ಅಸಿಸ್ಟೆಂಟ್‌ನ ಆವೃತ್ತಿಯನ್ನು ಪ್ರದರ್ಶಿಸಿತು.

ಆ್ಯಪಲ್‌ನ ಹೊಸ ಮಾದರಿ ಹಾಗೂ ಆವೃತ್ತಿಯ ಫೋನ್‌ಗಳನ್ನು ಪರಿಚಯಿಸಿದ ನಂತರ, ಮಧ್ಯಾಹ್ನ 1 ಗಂಟೆಯ ವೇಳೆಯಲ್ಲಿ ಆ್ಯಪಲ್ ನಷ್ಟವನ್ನು ಅನುಭವಿಸಿದೆ‌. ಹೊಸ ಮಾದರಿಯ ಫೋನ್‌ಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದಿರುವದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಪ್ರತೀ ಷೇರಿನ ಬೆಲೆ 9,119.5ಕ್ಕೆ ತಲುಪಿದ ನಂತರ 81 ಬಿಲಿಯನ್ ಡಾಲರ್ ನಷ್ಟವಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಮಾದರಿ ಹಾಗೂ ಆವೃತ್ತಿಯ ಫೋನ್‌ಗಳಲ್ಲಿ ಆಕರ್ಷಕ ಬದಲಾವಣೆ ಮಾಡುವದಾಗಿ ಹೇಳಿದೆ.

Share This Article
Leave a comment