ಜ. 1 ರಂದು ಪಿಯು ಕಾಲೇಜು ಆರಂಭ : ಮಾರ್ಗದರ್ಶಿ ಸೂತ್ರ ರಿಲೀಸ್

Team Newsnap
1 Min Read

ರೂಪಾಂತರಗೊಂಡ ಕೊರೋನಾ ವೈರಸ್ ಹರಡುವ ಭೀತಿಯ ನಡುವೆಯೂ ಜನವರಿ 1 ರಿಂದ ದ್ವಿತೀಯ ಪಿಯು ಕಾಲೇಜು ಆರಂಭವಾಗಲಿದೆ.

ದ್ವಿತೀಯ ಪಿಯುಸಿ ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆಯು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಮಾರ್ಗದರ್ಶಿ ಸೂತ್ರಗಳು ಏನು?

  • ದ್ವಿತೀಯ ಪಿಯು ವಿದ್ಯಾರ್ಥಿಗಳು
    ದಿನವಿಡೀ ತರಗತಿಯಲ್ಲಿ ಪಾಲ್ಗೊಳ್ಳುವ ಅಗತ್ಯವಿಲ್ಲ
  • ದಿನಕ್ಕೆ 45 ನಿಮಿಷಗಳ 4 ತರಗತಿಗಳನ್ನು ಮಾತ್ರ ನಡೆಸಬೇಕು.
  • ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ವಲ್ಲ.
  • ಒಂದು ತರಗತಿಯಲ್ಲಿ ಕೇವಲ 15 ಮಂದಿ ವಿದ್ಯಾರ್ಥಿಗಳು ಮಾತ್ರ ಇರಬೇಕು.
  • ಕೋವಿಡ್ ಹಿನ್ನೆಲೆಯಲ್ಲಿ ಸಿಬ್ಬಂದಿ ಗಳಿಗೆ ಬಯೋಮೆಟ್ರಿಕ್ ಕಡ್ಡಾಯವಲ್ಲ.
  • ಕಾಲೇಜಿನಲ್ಲಿ ಸಾಮೂಹಿಕ ಪ್ರಾರ್ಥನೆ, ಕ್ರೀಡೆ ನಿಷೇಧ.
  • 51 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಮಾಸ್ಕ್ ಜೊತೆಗೆ ಫೇಸ್ ಶೀಲ್ಡ್ ಕಡ್ಡಾಯ.
Share This Article
Leave a comment