ರಾಜಕೀಯ ದೊಡ್ಮನೆ ಗೌಡರ ಕುಟುಂಬದಿಂದ ಮತ್ತೊಂದು ಕುಡಿ, 7 ನೇ ವ್ಯಕ್ತಿ ರಾಜಕೀಯ ಅರಂಗ್ರೇಟಂಗೆ (ರಂಗ ಪ್ರವೇಶಕ್ಕೆ ) ಮುಹೂರ್ತ ಫಿಕ್ಸ್ ಮಾಡುವ ಲಕ್ಷಣಗಳು ಗೋಚರವಾಗಿದೆ.
ದಳಪತಿಗಳು ಹಾಸನದಲ್ಲಿನ ಪರಿಷತ್ ಚುನವಣೆಗೆ ಹೊಸ ತಂತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.
ದೇವೇಗೌಡರ ಮತ್ತೊಬ್ಬ ಮೊಮ್ಮಗ, ರೇವಣ್ಣರ ಜೇಷ್ಠ ಪುತ್ರ ಸೂರಜ್ ರಾಜಕೀಯಕ್ಕೆ ಎಂಟ್ರಿ ಆಗುವ ಸಾಧ್ಯತೆ ದಟ್ಟವಾಗಿದೆ.
ಸೂರಜ್ ಎಂಟ್ರಿ ಕುಟುಂಬ ರಾಜಕಾರಣ ಎಂಬ ಕಳಂಕ ಬರುವ ಆತಂಕದ ನಡುವೆ ದೇವೇಗೌಡರು ಪ್ಲ್ಯಾನ್ ಬಿ ಕೂಡ ರೆಡಿ ಮಾಡಿಕೊಂಡಿದ್ದಾರಂತೆ. ಹೀಗಾಗಿ ಸೂರಜ್ ಜೊತೆಗೆ ಭವಾನಿ ರೇವಣ್ಣ ಹೆಸರೂ ಕೇಳಿಬರುತ್ತಿದೆ.
ರೇವಣ್ಣ ಪತ್ನಿ ಭವಾನಿ ರೇವಣ್ಣ ಇಲ್ಲವೇ ಪುತ್ರ ಸೂರಜ್ಗೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಟವಣೆಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ. ಇವರಿಬ್ಬರಲ್ಲಿ ಒಬ್ಬರ ಎಂಟ್ರಿ ಆಗಬಹುದು ಎಂಬ ಬಗ್ಗೆ ಗುಸುಗುಸು ಚರ್ಚೆ ನಡೀತಿದೆ.
ಮಹಿಳೆ ಎಂಬ ಕಾರಣಕ್ಕೆ ಭವಾನಿ ರೇವಣ್ಣರೇ ಸೂಕ್ತವೆಂಬ ಮಾತು ಕೇಳಿಬರುತ್ತಿದೆ. ಇನ್ನು ಜಿಲ್ಲಾ ರಾಜಕಾರಣದಲ್ಲೂ ಛಾಪು ಮೂಡಿಸಿರುವ ಭವಾನಿ ರೇವಣ್ಣ ನಡುವೆಯೇ ಭವಾನಿ ಪುತ್ರ ಸೂರಜ್ ಸ್ಪರ್ಧೆ ಕುರಿತೂ ಚರ್ಚೆ ನಡೀತಿದೆ. ಈ ವಿಚಾರ ಸುದ್ದಿಯಲ್ಲಿರುವ ನಡುವೆ ಈಗಾಗ್ಲೇ ಸೂರಜ್ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಗೌಡರ ರಾಜಕೀಯ ವಂಶವೃಕ್ಷ:
ಹೆಚ್.ಡಿ ದೇವೇಗೌಡ ರಾಜ್ಯಸಭಾ ಸದಸ್ಯರಾಗಿದ್ದಾರೆ. ದೇವೇಗೌಡರ ಪುತ್ರ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ ಶಾಸಕರು. ಸೊಸೆ ಅನಿತಾ ಕುಮಾರಸ್ವಾಮಿ ಶಾಸಕಿ, ಮೊಮ್ಮಗ ಪ್ರಜ್ವಲ್ ಸಂಸದರಾಗಿದ್ದಾರೆ. ಇತ್ತ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯೆ ಆಗಿದ್ದಾರೆ. ಈಗ ಮತ್ತೊಬ್ಬರ ಎಂಟ್ರಿಯಿಂದ ಕುಟುಂಬದ ಏಳು ಮಂದಿ ರಾಜಕೀಯಕ್ಕೆ ಬಂದಂತಾಗುತ್ತೆ.
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು