February 21, 2026

Newsnap Kannada

The World at your finger tips!

nagabhushan pande

ಮತ್ತೊಂದು ಆರ್ಥಿಕ ಉತ್ತೇಜಕ ಫ್ಯಾಕೇಜ್: ಹಣಕಾಸು ಕಾರ್ಯದರ್ಶಿ ಸುಳಿವು

Spread the love

ಕೊರೋನಾ ಸೋಂಕು ಕಾರಣದ ಆರ್ಥಿಕ ಹಿಂಜರಿಕೆಯ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತೊಂದು ಆರ್ಥಿಕ ಉತ್ತೇಜಕ ಫ್ಯಾಕೇಜ್ ಅನ್ನು ಸಿದ್ಧಗೊಳಿಸುತ್ತಿದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ್ ನಾಗಭೂಷಣ್ ಪಾಂಡೆ ತಿಳಿಸಿದ್ದಾರೆ.

ಸದ್ಯ ದೇಶದಲ್ಲಿ ಕೋವಿಡ್ 19 ಪೂರ್ವದ ಸ್ಥಿತಿ ಮರಳಿದ್ದರು. ಅರ್ಥ ವ್ಯವಸ್ಥೆಯ ಚೇತರಿಕೆಗಾಗಿ ಮೋದಿ ಸರ್ಕಾರ ಮತ್ತೊಂದು ಆರ್ಥಿಕ ಉತ್ತೇಜಕ ಫ್ಯಾಕೇಜ್ ಅನ್ನು ಸಿದ್ಧಪಡಿಸುತ್ತಿದೆ.

ಕೈಗಾರಿಕಾ ಸಂಸ್ಥೆಗಳು, ವಾಣಿಜ್ಯ ಸಂಘಟನೆಗಳು, ವಿವಿಧ ಸಚಿವಾಲಯ ಮತ್ತು ವಿವಿಧ ಸಚಿವಾಲಯ ಮತ್ತು ಪಾಲುದಾರರೊಂದಿಗೆ ಮಾತುಕತೆಗಳು ಮುಂದುವರಿದಿದೆ. ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಕಾಲಿಕವಾಗಿ ಅಗತ್ಯ ಕ್ರಮಗಳನ್ನು, ಫ್ಯಾಕೇಜ್ ಗಳನ್ನು ಸರ್ಕಾರ ಘೋಷಿಸುತ್ತಿದೆ ಎಂದು ಪಾಂಡೆ ಅವರು ತಿಳಿಸಿದ್ದಾರೆ.

error: Content is protected !!