December 22, 2024

Newsnap Kannada

The World at your finger tips!

21710cec b504 4946 925e 8697e8c533dc

ಬೆಂಗಳೂರಿನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ: ಯಾವುದೇ ಪ್ರಾಣಾಪಾಯವಿಲ್ಲ

Spread the love

ಬೆಂಗಳೂರಿನಲ್ಲಿ ಮತ್ತೊಂದು ಮೂರು ಅಂತಸ್ತಿನ ಕಟ್ಟಡ ಕುಸಿತ ಸಂಭವಿಸಿದೆ. ನಗರದ ಡೈರಿ ಸರ್ಕಲ್​ ಬಳಿ ಇರುವ ಕೆಎಂಎಫ್​​ ಕ್ವಾರ್ಟರ್ಸ್​ ಒಳಗಡೆ ಇರುವ ಮೂರು ಅಂತಸ್ತಿನ ಕಟ್ಟಡ ಕುಸಿತವಾಗಿದೆ. ನಿನ್ನೆಯಷ್ಟೇ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟದ ಕುಸಿತವಾಗಿತ್ತು.

ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ, ಆದರೆ ಇಬ್ಬರಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಕಟ್ಟಡ ಕುಸಿತ ಬೆನ್ನಲ್ಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಬೆಳಿಗ್ಗೆ ಕಟ್ಟಡ ಕುಸಿಯಲು ಶುರುವಾಗಿದೆ, ಈ ವೇಳೆ ಕೆಎಂಎಫ್ ಸಿಬ್ಬಂದಿಯೇ ಮನೆಯಲ್ಲಿದವರನ್ನು ರಕ್ಷಿಸಿದ್ದಾರೆ. ಕಟ್ಟಡ ಕುಸಿತವಾಗಿರೋ ಸ್ಥಳದ ಅಕ್ಕಪಕ್ಕವಿದ್ದ 18 ಕುಟುಂಬಗಳನ್ನ ಶಿಫ್ಟ್ ಮಾಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!