December 19, 2024

Newsnap Kannada

The World at your finger tips!

93145f4b 450a 4c93 a101 8f7302bb8ddc

ಅಪ್ಪು ಹಠಾತ್ ನಿಧನಕ್ಕೆ ನೊಂದ ಇಬ್ಬರು ಅಭಿಮಾನಿಗಳು ಆತ್ಮಹತ್ಯೆ

Spread the love

ದಾವಣಗೆರೆ ಮತ್ತು ತುಮಕೂರಿನಲ್ಲಿ ಇಬ್ಬರ ಅಭಿಮಾನಿಗಳು ಪುನೀತ್ ಹಠಾತ್ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ದಾವಣಗೆರೆ ವಿಜಯನಗರದ ಸಾಯಿ ಮಂದಿರ ನಿವಾಸಿ ಸಿ ಕುಮಾರ್ (25) ಅಪ್ಪು ನಿಧನದಿಂದ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ಯಾರೂ ಇಲ್ಲದೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಗಾಂಧಿನಗರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

ಅಪ್ಪು ಹೋದ. ಜಾಗಕ್ಕೆ ಹೋಗುವೆ :

ಅಪ್ಪು ಹೋದಲ್ಲಿಗೇ ನಾನೂ ಹೋಗ್ತೀನಿ, ನನ್ನ ಕಣ್ಣುಗಳನ್ನೂ ದಾನ ಮಾಡಿ ಎಂದು ಮತ್ತೊಬ್ಬ
ಅಭಿಮಾನಿ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯಲ್ಲಿ ಜರುಗಿದೆ.

ಹೆಬ್ಬೂರಿನ ಕೋಡಿಪಾಳ್ಯ ಗ್ರಾಮದ ನಿವಾಸಿ 30 ವರ್ಷದ ಭರತ್‌ ಎಂಬಾತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅಪ್ಪು ಅಭಿಮಾನಿಯಾಗಿದ್ದ ಭರತ್‌, ಪುನೀತ್ ಸಾವನ್ನು ಅರಗಿಸಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಅಪ್ಪುರಂತೆಯೇ ಸಾವಿನ ಬಳಿಕ ಭರತ್‌ನ ಎರಡು ಕಣ್ಣುಗಳನ್ನ ದಾನ ಮಾಡಲಾಗಿದೆ ಅಂತ ಕುಟುಂಬಸ್ಥರು ಹೇಳಿದ್ದಾರೆ.

ಈಘಟನೆ ಸಂಬಂಧ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾನು ಅಪ್ಪು ಅಭಿಮಾನಿಯಾಗಿದ್ದು ಅವರ ಸಾವನ್ನು ಸಹಿಸಲಾಗುತಿಲ್ಲ. ಅಪ್ಪು ಹೋದ ಜಾಗಕ್ಕೆ ನಾನು ಹೋಗುತಿದ್ದೇನೆ. ಪುನೀತ್​ರಂತೆ ನನ್ನ ಕಣ್ಣನ್ನೂ ದಾನ ಮಾಡಿ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ
ಶರಣಾಗಿದ್ದಾನೆ ಮಾಹಿತಿ ಇದೆ

Copyright © All rights reserved Newsnap | Newsever by AF themes.
error: Content is protected !!