ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ : ಮಾಜಿ ಸಿಎಂ ಡಿವಿಎಸ್

Team Newsnap
1 Min Read

ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಹಾಸನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿವಿಎಸ್ ನಾನು ಬಿಜೆಪಿ ಪಕ್ಷದಿಂದ ಗರಿಷ್ಠ ಪ್ರಯೋಜನಗಳನ್ನು ಪಡೆದಿದ್ದೇನೆ. ಅದಕ್ಕಿಂತ ನಾನು ಹೆಚ್ಚಿನದ್ದನ್ನು ಬಯೋಸೋದಿಲ್ಲ ಎಂದು ತಿಳಿಸಿದರು.

ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಬಿಜೆಪಿ ನನಗೆ ಎಲ್ಲವನ್ನು ಕೊಟ್ಟಿದೆ. ಹೀಗಾಗಿ ನಾನು ಚುನಾವಣಾ ರಾಜಕೀಯದಲ್ಲಿ ಮುಂದುವರೆಯದೇ ಇರೋದಕ್ಕೆ ನಿರ್ಧಾರ ಕೈಗೊಂಡಿದ್ದೇನೆ ಎಂದರು.

ನಾನು 10 ವರ್ಷ ಶಾಸಕನಾಗಿದ್ದೇನೆ. 20 ವರ್ಷ ಸಂಸದನಾಗಿ ಕಾರ್ಯ ನಿರ್ವಹಿಸಿದ್ದೇನೆ. ಒಂದು ವರ್ಷ ಮುಖ್ಯಮಂತ್ರಿಯಾಗಿದ್ದೇನೆ. 4 ವರ್ಷ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. 7 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ನನಗೆ ಇದಕ್ಕಿಂತ ಹೆಚ್ಚಿನದ್ದು ಏನೂ ಬೇಡ ಎಂದು ತಿಳಿಸಿದರು.

ಎಲ್ಲಾ ರಾಜಕೀಯ ಪಕ್ಷದಲ್ಲಿ ನಾನು ಸತ್ಯಹರಿಶ್ಚಂದ್ರ ಅಂತ ಹೇಳಿಕೊಂಡರು ಕೂಡ ಹತ್ತು ಪರ್ಸೆಂಟ್ ಜನ ಅಧಿಕಾರಕ್ಕಾಗಿ ಜಂಪ್ ಮಾಡುವವರಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ತಕ್ಷಣ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಕ್ಷಣ ಬಿಜೆಪಿಯಿಂದ ಕಾಂಗ್ರೆಸ್, ಏನೂ ಇಲ್ಲದ ಜೆಡಿಎಸ್ ಅಧಿಕಾರಕ್ಕೆ ಬಂದರೆ ತಕ್ಷಣ ಅವರ ಜೊತೆ. ಈ ರೀತಿ ಹೋಗುವಂತವರು ಎಲ್ಲಾ ಪೊಲಿಟಿಕಲ್ ಪಾರ್ಟಿಯಲ್ಲಿದ್ದಾರೆ. ಅದರಿಂದ ನಮ್ಮ ಪಾರ್ಟಿ ಹೊರತಾಗಿಲ್ಲ ಎಂದು ಹೇಳಿದರು. 

Share This Article
Leave a comment