ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ, ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ. ಆಸೀಸ್ನ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ಅಪಘಾತದಲ್ಲಿ 46 ವರ್ಷದ ಸೈಮಂಡ್ಸ್ ಸಾವನ್ನಪ್ಪಿದ್ದಾರೆ.
ಆಸ್ಟ್ರೇಲಿಯಾ ಪರ ಸೈಮಂಡ್ಸ್ 26 ಟೆಸ್ಟ್, 198 ಏಕದಿನ ಹಾಗೂ 20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. , 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರು.
ಏಕದಿನ ಕ್ರಿಕೆಟ್ನ ಸ್ಪೆಷಲಿಸ್ಟ್ ಪ್ಲೇಯರ್ ಆಗಿದ್ದ ಸೈಮಂಡ್ಸ್ 2003 ಮತ್ತು 2007ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಕಳೆದ ಎರಡು ತಿಂಗಳ ಅವಧಿಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾಗೆ ಎದುರಾದ ಎರಡನೇ ಅಘಾತ ಇದಾಗಿದೆ.
ಇದನ್ನು ಓದಿ : ಆಸೀಸ್ (Australian) ಕ್ರಿಕೆಟ್ ಐಕಾನ್, ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನ
ಎರಡು ತಿಂಗಳ ಹಿಂದೆಯಷ್ಟೇ ಶೇನ್ ವಾರ್ನ್ (52)ನಿಧನರಾಗಿದ್ದರು. ಸೈಮಂಡ್ಸ್ ನಿಧನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಸಂತಾಪ ಸೂಚಿಸಿದೆ.
More Stories
ಗಾಯಗೊಂಡ ಜಸ್ಪ್ರೀತ್ ಬುಮ್ರಾ IPL ನಿಂದ ಹೊರಗುಳಿಯುವ ಸಾಧ್ಯತೆ!
ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್ ಶರ್ಮಾ ನಿವೃತ್ತಿ?
ಏಕದಿನ ಕ್ರಿಕೆಟ್ಗೆ ಸ್ಟೀವ್ ಸ್ಮಿತ್ ವಿದಾಯ: ಆಸ್ಟ್ರೇಲಿಯಾ ಬ್ಯಾಟಿಂಗ್ ದಿಗ್ಗಜನ ನಿವೃತ್ತಿ ಘೋಷಣೆ