November 19, 2024

Newsnap Kannada

The World at your finger tips!

4eedcd20 951b 47de b8cf 4384790d8cd3

ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಭಾರತ ಮೂಲದ ನ್ಯೂಜಿಲೆಂಡ್ ಸಂಸದ

Spread the love

ಭಾರತದ ನಾಯಕರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸುವುದನ್ನು ಅಪರೂಪ ಎಂದು ಭಾವಿಸುವ ಕಾಲಘಟ್ಟದಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ಭಾರತೀಯ ಮೂಲದ ನಾಯಕರೊಬ್ಬರು ಸಂಸದರಾಗಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಚ್ಚರಿ ಮೂಡಿಸಿದ್ದಾರೆ. 

ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದಲ್ಲಿ ದೇಶ ಸುರಿನಾಮ್ ಅಧ್ಯಕ್ಷರಾಗಿರುವ ಭಾರತೀಯ ಮೂಲದ ಚಂದ್ರಿಕಾಪರ್ಸಾದ್ “ಚಾನ್” ಸಂತೋಖಿ ಈ ಹಿಂದೆ ತಾವು ಅಧ್ಯಕ್ಷರಾಗಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಈ ಬಳಿಕ ಈಗ ಲೇಬರ್ ಪಕ್ಷದಿಂದ ಸಂಸದರಾಗಿ ಆಯ್ಕೆಗೊಂಡಿರುವ ಭಾರತೀಯ ಮೂಲದ ಗೌರವ್ ಶರ್ಮಾ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿರುವ ಭಾರತೀಯ ಮೂಲದ 2 ನೇ ನಾಯಕರಾಗಿದ್ದಾರೆ.

ಸಂಸ್ಕೃತ ಭಾರತದ ಬಹುತೇಕ ಎಲ್ಲಾ ಭಾಷೆಗಳಿಗೂ ತಾಯಿ ಭಾಷೆ ಇದ್ದಂತೆ, ಆದ್ದರಿಂದ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುವುದರಿಂದ ಭಾರತದ ಎಲ್ಲಾ ಭಾಷೆಗಳನ್ನೂ ಗೌರವಿಸಿದಂತಾಗುತ್ತದೆ ಎಂಬುದು ಹ್ಯಾಮಿಲ್ಟನ್ ವೆಸ್ಟ್ ಸಂಸದರಾಗಿರುವ ಶರ್ಮಾ ಅವರ ಅಭಿಪ್ರಾಯ.

ನೀವೇಕೆ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿಲ್ಲ ಎಂಬುದು ಟ್ವೀಟಿಗರು ಶರ್ಮಾ ಅವರ ಮುಂದಿಟ್ಟ ಪ್ರಶ್ನೆಯಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಾಸ್ತವವಾಗಿ ನಾನು ಹಿಂದಿ ಅಥವಾ ನನ್ನ ಮೊದಲ ಭಾಷೆ ಪಹರಿ ಅಥವಾ ಪಂಜಾಬಿಯಲ್ಲಿ ಪ್ರಮಾಣವಚನ ಸ್ವೀಕರಿಸಲು ಚಿಂತಿಸಿದ್ದೆ, ಆದರೆ ಅದರಿಂದ ಎಲ್ಲರನ್ನೂ ಸಂತೋಷಪಡಿಸುವುದು ಕಷ್ಟವಾಗಿತ್ತು. ಆದರೆ ಸಂಸ್ಕೃತ ಭಾರತದ ಎಲ್ಲಾ ಭಾಷೆಗಳಿಗೂ ಮನ್ನಣೆ ನೀಡಿದ ಭಾಷೆಯಾಗಿದೆ. ಆದ್ದರಿಂದ ನಾನು ಮತನಾಡಲು ಸಾಧ್ಯವಿಲ್ಲದ ಭಾರತೀಯ ಭಾಷೆಗಳನ್ನೂ ಗೌರವಿಸಲು ನಾನು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದೆ ಎನ್ನುತ್ತಾರೆ ಗೌರವ್ ಶರ್ಮಾ.

“ನಾನು ಭಾರತದ ಅನೇಕ ಭಾಷೆಗಳಲ್ಲಿ ಮಾತನಾಡಬಲ್ಲೆ ಆದರೆ ಪ್ರಸ್ತುತ ವ್ಯಾಪಕವಾಗಿ ಮಾತನಾಡಲಾಗುತ್ತಿರುವ ಭಾಷೆಗಳ ಪ್ರಾತಿನಿಧ್ಯವಾಗಿ ಸಂಸ್ಕೃತವನ್ನು ಆಯ್ದುಕೊಂಡೆ” ಎಂದು ಶರ್ಮಾ ಹೇಳಿದ್ದಾರೆ. 

“ಸಂಸ್ಕೃತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅತ್ಯಂತ ಪ್ರಾಚೀನ ಭಾಷೆ ಎನಿಸಿಕೊಂಡಿರುವುದಷ್ಟೇ ಅಲ್ಲದೇ ಭಾರತದ ಅನೇಕ ಭಾಷೆಗಳ ತಾಯಿ, ಉಗಮದ ಮೂಲ ಎಂಬ ಖ್ಯಾತಿಯನ್ನೂ ಹೊಂದಿದೆ” ಎನ್ನುವ ಶರ್ಮಾ, ಶಾಲಾ ದಿನಗಳಲ್ಲಿ ಭಾರತದಲ್ಲಿ ತಾವೂ ಸಂಸ್ಕೃತವನ್ನು ಅಧ್ಯಯನ ಮಾಡಿರುವುದಾಗಿ ಹೇಳಿದ್ದಾರೆ. 

Copyright © All rights reserved Newsnap | Newsever by AF themes.
error: Content is protected !!