December 22, 2024

Newsnap Kannada

The World at your finger tips!

1806e1c6 7f0b 4672 b907 a98b130ae81f

ಚಿರು ಮಗನಿಗೆ ಕಿಚ್ಚನ ದುಬಾರಿ ಗಿಫ್ಟ್​..!

Spread the love

ದಿನ ಉರುಳಿದ್ರೂ ಚಿರು ಸಾವಿನ ನೋವು ಎಲ್ಲರನ್ನ ಬೆಂಬಿಡದೆ ಕಾಡ್ತಿದೆ. ಅದ್ರಲ್ಲೂ ಚಿರು ಜೊತೆಗೆ ಕಿಚ್ಚನಿಗಿದ್ದ ಆ ಒಡನಾಟ, ಸಾಂಗತ್ಯ ನೆನಪು ಕರುನಾಡ ಮಾಣಿಕ್ಯ ಕಿಚ್ಚ ಸುದೀಪನನ್ನ ಇನ್ನೂ ಕಾಡ್ತಿದೆ.

ಇದೀಗ ಕಿಚ್ಚ ಇದೇ ನನಪಿನಲ್ಲಿ ತಮ್ಮನಂತಿದ್ದ ಚಿರುನ ಮುದ್ದಾದ ಗಂಡು ಮಗುವಿಗೆ ದುಬಾರಿ ಉಡುಗೊರೆಯನ್ನೆ ಕೊಟ್ಟಿದ್ದಾರೆ.

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ಪ್ರೀತಿಯ ಕಾಣಿಕೆಯಾದ ಜೂನಿಯರ್​​ ಚಿರು ತೊಟ್ಟಿಲು ಶಾಸ್ತ್ರದ ಸಂಭ್ರಮ ಇತ್ತೀಚೆಗಷ್ಟೆ ನೆರವೇರಿತ್ತು. 4 ತಿಂಗಳನ್ನ 40 ವರ್ಷದಂತೆ ಕಳೆದು, ಯಾತನೆ ಅನುಭವಿಸಿದ ಕುಟುಂಬಕ್ಕೆ ವರವಾದಂತಿತ್ತು ಈ ಪುಟ್ಟ ಕಂದಮ್ಮ. ಅಕ್ಟೋಬರ್​​ 22 ರಂದು ಮೇಘನಾ-ಚಿರು ಕುಡಿ ಜನನವಾಯ್ತು. ಅಲ್ಲಿಂದ ಈ ಮಗುವನ್ನ ದೈವ ಸ್ವರೂಪದಂತೆ ಕುಟುಂಬ ನೋಡ್ತಿದೆ.

ಇನ್ನು ಒಂದೇ ತಾಯಿ ಮಕ್ಕಳಲ್ಲದಿದ್ದರು ಚಿರು-ಕಿಚ್ಚ ರಾಮ ಲಕ್ಷ್ಮಣರಂತಿದ್ದರು. ಇವ್ರಿಬ್ಬರ ಬಾಂಧವ್ಯದ ನಂಟು ಎರಡು ಮೂರು ವರ್ಷದ್ದಲ್ಲ. ಬರೋಬ್ಬರಿ 10 ವರ್ಷದ ಬಾಂಧವ್ಯ. ಸ್ವತಃ ಸಹೋದರರಂತೆ ಪ್ರೀತಿಯಿಂದ ಇದ್ದವರು ಇವರಿಬ್ಬರು. ಅಷ್ಟೇ ಯಾಕೆ ಚಿರು ಹರಟೆ, ಮಾತುಕತೆ, ಪಾರ್ಟಿ ಎಲ್ಲವೂ ಕಿಚ್ಚನ ಮನೆಯಲ್ಲಿ ನಡೆಯುತ್ತಿತ್ತು. ಕೇವಲ ಚಿರು ಮಾತ್ರವಲ್ಲ ಸರ್ಜಾ ಕುಟುಂಬ ಹಾಗೂ ಮೇಘನಾ ಕುಟುಂಬದಲ್ಲಿ ಒಬ್ಬರಾಗಿದ್ದವರು ಕಿಚ್ಚ ಸುದೀಪ್​. ಅಂದು ಧ್ರುವಾ ಸರ್ಜಾ ಮದುವೆಯಲ್ಲಿ ಬಂದು ನವಜೋಡಿಗೆ ಹರಸಿ ಹಾರೈಸಿದ್ರು ಕಿಚ್ಚ ಸುದೀಪ್. ಧ್ರುವಾ ಮದುವೆ ಕಾರ್ಯಗಳಿವೆ ಬೆನ್ನೆಲುಬಾಗಿ ನಿಂತಿದ್ರು.

ಮಗುವಿನ ಜನನಕ್ಕೂ ಮುಂಚೆ ಧ್ರುವ ಸರ್ಜಾ ಬೆಳ್ಳಿ ತೊಟ್ಟಿಲನ್ನು ಖರೀದಿಸಿದ್ದು ಸಖತ್ ವೈರಲ್ ಆಗಿತ್ತು. ಹಾಗೇ ಬಾಲಕೃಷ್ಣನ ಕಲಘಟಿ ಬಣ್ಣದ ಚಂದನೇಯ ತೊಟ್ಟಿಲು ಉಡುಗೊರೆಯಾಗಿ ಕೊಟ್ಟಿದ್ದು, ಅದನ್ನ ನಾವು ಜ್ಯೂನಿಯರ್​ ಚಿರು ತೊಟ್ಟಿಲು ಶಾಸ್ತ್ರದಲ್ಲಿ ನೋಡಿದ್ವಿ. ಹೀಗೆ ಹಲವಾರು ಸೆಲೆಬ್ರಿಟಿಗಳು ಹಲವಾರು ಉಡುಗೊರೆಗಳನ್ನು ಕಳುಹಿಸಿದ್ದರು. ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಸರದಿ.

ಸುದೀಪ್​ ತಮ್ಮ ಮೋಸ್ಟ್​ ಅವೈಟೆಡ್​ ಸಿನಿಮಾ ಫ್ಯಾಂಟಮ್​ ಚಿತ್ರದ ಶೂಟಿಂಗ್​ಗಾಗಿ ಹೈದರಬಾದ್​ನಲ್ಲಿ ಇದ್ದಾರೆ. ಹೀಗಾಗಿ ಕಿಚ್ಚ ಚಿರು ಮಗುವನ್ನ ನೇರವಾಗಿ ನೋಡಿ ವಿಷ್​ ಮಾಡಲು ಆಗಿರಲಿಲ್ಲ. ಆದ್ರೆ ಫೋನ್​ ಮಾಡೋ ಮೂಲಕ ಕಿಚ್ಚ ಶುಭಾಶಯ ತಿಳಿಸಿದ್ರು. ಈಗ ಕಿಚ್ಚ ಹೈದರಬಾದ್​ನಲ್ಲೇ ಇದ್ದುಕೊಂಡು ಚಿರು ಮಗುವಿಗೆ ದುಬಾರಿ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ.

ವರದ ನಾಯಕ ಸಿನಿಮಾದಲ್ಲಿ ಸುದೀಪ್​ ಮತ್ತು ಚಿರು ಸಹೋದರರಾಗಿ ಬಣ್ಣ ಹಚ್ಚಿದ್ರು. ನಿಜ ಜೀವನದಲ್ಲೂ ಹಾಗೇ ಇದ್ರು. ಇದೀಗ ಸಹೋದರರ ಮಗುವಿಗೆ ಸುದೀಪ್​ ಡೈಮಂಡ್​ ಪೆಂಡೆಂಟ್​ ಗಿಫ್ಟ್​ ಕೊಟ್ಟಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!