ಆಸ್ಟ್ರೇಲಿಯಾ ಹಾಗೂ ಭಾರತದ ನಡುವಿನ ಪಂದ್ಯ ಜಿದ್ದಾಜಿದ್ದಿನಿಂದ ನಡೆಯುತ್ತಿದ್ದರೆ ಇತ್ತ ಸ್ಟೇಡಿಯಂನಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದ ಸಂದರ್ಭದಲ್ಲಿ ಯುವಕನೋರ್ವ ಪ್ರೇಮ ನಿವೇದನೆ ಮಾಡಿದ ಘಟನೆ ನಡೆದಿದೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯ್ಯರ್ ಬ್ಯಾಟಿಂಗ್ ನಡೆಸುತ್ತಿದ್ದರು. ಭಾರತದ ಇನ್ನಿಂಗ್ಸ್‌ನ 20ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಕುತೂಹಲಕಾರಿ ಸಂಗತಿ ಎಂದರೆ ಯುವಕ ಭಾರತೀಯನಾಗಿದ್ದು ಯುವತಿ ಆಸ್ಟ್ರೇಲಿಯಾ ಪ್ರಜೆಯಾಗಿದ್ದಾಳೆ. ಟೀಮ್ ಇಂಡಿಯಾದ ಜರ್ಸಿ ತೊಟ್ಟಿದ್ದ ಯುವಕ ಆಸ್ಟ್ರೇಲಿಯಾದ ಯುವತಿಗೆ ಪ್ರೇಮ ನಿವೇದನೆಯನ್ನು ಮಾಡಿದ್ದಾನೆ.
ಈ ಪ್ರೇಮ ನಿವೇದನೆಗೆ ಪ್ರೇಯಸಿಯೂ ಕೂಡ ಒಪ್ಪಿಗೆಯನ್ನು ಸೂಚಿಸಿರುವುದು ಕಂಡು ಬಂದಿದೆ. ಹೀಗಾಗಿ ಇಬ್ಬರೂ ಮೈದಾನದಲ್ಲೇ ಅಪ್ಪಿಕೊಂಡು ಸಂಭ್ರಮ ಹಂಚಿಕೊಂಡಿದ್ದಾರೆ. ಬಳಿಕ ಯುವಕ ಆ ಯುವತಿಗೆ ಮೈದಾನದಲ್ಲೇ ಉಂಗುರವನ್ನು ಕೂಡ ತೊಡಿಸಿದ್ದಾನೆ.
ಈ ಎಲ್ಲಾ ದೃಶ್ಯಗಳು ಮೈದಾನದ ದೊಡ್ಡ ಪರದೆಯಲ್ಲಿ ಬಿತ್ತರವಾಗುತ್ತಿತ್ತು. ಈ ದೃಶ್ಯವನ್ನು ಮೈದಾನದಲ್ಲಿ ಆಡುತ್ತಿದ್ದ ಆಟಗಾರರು ಕೂಡ ಕಂಡು ಚಪ್ಪಾಳೆ ತಟ್ಟುವ ಮೂಲಕ ಶುಭ ಹಾರೈಸಿದ್ದಾರೆ. ಟಿವಿ ನೇರಪ್ರಸಾರದಲ್ಲೂ ಈ ದೃಶ್ಯಗಳು ಪ್ರಸಾರವಾಗಿದ್ದು ಕೋಟ್ಯಂತರ ಪ್ರೇಕ್ಷಕರ ಸಮ್ಮುಖದಲ್ಲಿ ಈ ಪ್ರೇಮ ನಿವೇದನೆ ವಿಶಿಷ್ಟವಾಗಿ ನಡೆದಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು