ಅಮೆರಿಕ (America) ಸೇನೆ ಯುದ್ಧದಲ್ಲಿ ಭಾಗಿ ಆಗುವುದಿಲ್ಲ. ಆದರೆ ಉಕ್ರೇನ್ ಗೆ ಬೆಂಬಲ ಇದೆ ಎಂದ ಜೋ ಬೈಡನ್ ಭರವಸೆ ನೀಡಿದ್ದಾರೆ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 6 ದಿನಗಳ ಹಿಂದೆ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನಾವು (ರಷ್ಯಾ) ಉಕ್ರೇನ್ನನ್ನು ಹಿಮ್ಮೆಟ್ಟಿಸುತ್ತೇವೆ ಎಂದು ರಷ್ಯಾ ಭಾವಿಸಿತ್ತು. ಉಕ್ರೇನ್ ಜನರು ರಷ್ಯಾಕ್ಕೆ ಉತ್ತರವನ್ನು ನೀಡುತ್ತಿದ್ದಾರೆ, ಉಕ್ರೇನಿಯರು ಧೈರ್ಯ ತೋರಿಸಿದ್ದಾರೆ. ಉಕ್ರೇನ್ ಜನರೊಂದಿಗೆ ಅಮೆರಿಕ ನಿಂತಿದೆ ಎಂದು ಅಮೇರಿಕಾಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧದ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು, ‘ಸ್ಟೇಟ್ ಆಫ್ ಯೂನಿಯನ್’ (ಎಸ್ಒಟಿಯು) ಅನ್ನು ಉದ್ದೇಶಿಸಿ ಅಧ್ಯಕ್ಷ ಬೈಡನ್ ಮಾತನಾಡಿದರು.
ರಷ್ಯಾ ಪ್ರಪಂಚದ ಅಡಿಪಾಯವನ್ನು ಅಲುಗಾಡಿಸಲು ಪ್ರಯತ್ನಿಸಿದೆ. ರಷ್ಯಾ ಪ್ರಪಂಚದ ಅಡಿಪಾಯವನ್ನು ಅಲುಗಾಡಿಸಲು ಪ್ರಯತ್ನಿಸಿದೆ. ಪುಟಿನ್ ಯುದ್ಧಭೂಮಿಯಲ್ಲಿ ಪ್ರವೀಣರಿರಬಹುದು, ಆದರೆ ಮುಂದಿನ ದಿನಗಳಲ್ಲಿ ಅವರು ಅದಕ್ಕೆ ಬೆಲೆಯನ್ನು ತೆತ್ತುತ್ತಾರೆ. ನಾವು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿದ್ದೇವೆ. ಅಮೆರಿಕಾ ಮಾತ್ರವಲ್ಲ, ವಿಶ್ವದ ಅನೇಕ ದೇಶಗಳು ಉಕ್ರೇನ್‌ನೊಂದಿಗೆ ನಿಂತಿವೆ.
ಈ ಸಮಯದಲ್ಲಿ ಅಮೆರಿಕದ ವಾಯುನೆಲೆಗಳಿಗೆ ರಷ್ಯಾ ವಿಮಾನಗಳು ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಅಮೆರಿಕ ಏರ್ಸ್ಪೇಸ್ಗೆ ರಷ್ಯಾಗೆ ನೋ ಎಂಟ್ರಿ ಎಂದಿದೆ . ಅಮೆರಿಕ ಮತ್ತು ನಮ್ಮ ಮಿತ್ರರಾಷ್ಟ್ರಗಳು ನ್ಯಾಟೋದ ಪ್ರತಿಯೊಂದು ಇಂಚಿನ್ನೂ ಸಾಮೂಹಿಕ ಶಕ್ತಿಯೊಂದಿಗೆ ರಕ್ಷಿಸುತ್ತವೆ ಎಂದು ಭರವಸೆ ನೀಡಿದರು.
- ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
- ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
- MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ
- HDK – ನಿಖಿಲ್ ವಿರುದ್ಧ ಎಡಿಜಿಪಿ ಚಂದ್ರಶೇಖರ್ ದೂರು ದಾಖಲು
- ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಪ್ರಚಾರದಲ್ಲಿ ಸಕ್ರಿಯ
More Stories
MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ
ನಟ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ
2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 67 ಸಾಧಕರ ಪಟ್ಟಿ ಇಲ್ಲಿದೆ