December 27, 2024

Newsnap Kannada

The World at your finger tips!

WhatsApp Image 2022 06 13 at 8.08.17 PM

ಅಮೃತ ಬಳ್ಳಿ : ಔಷಧೀಯ ಗುಣವುಳ್ಳ : ಅಮೃತಕ್ಕೆ ಸಮಾನವಾದ ಗಿಡಮೂಲಿಕೆ

Spread the love

ಅಮೃತ ಬಳ್ಳಿ ಹೆಸರೇ ಸೂಚಿಸುವಂತೆ ಇದೊಂದು ಅಮೃತಕ್ಕೆ ಸಮಾನವಾದ ಗಿಡಮೂಲಿಕೆಯಾಗಿದೆ. ಎಲ್ಲಾ ಪ್ರದೇಶದಲ್ಲೂ ,ಎಲ್ಲಾ ಕಾಲದಲ್ಲಿಯೂ ಬೆಳೆಯುವ ಅದ್ಬುತ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ,ಕೆಲವರು ಮನೆಯ ಅಂಗಳದಲ್ಲಿ ಅಲಂಕಾರಕ್ಕಾಗಿಯೂ ಬೆಳೆಸುತ್ತಾರೆ.

ಇದನ್ನು ಓದಿ –ದೊಡ್ಡಪತ್ರೆ ( Mexican mint plant) 

ಆಯುರ್ವೇದ ಗಿಡಮೂಲಿಕೆಗಳಲ್ಲಿ ವಿಶೇಷವಾದ ಔಷಧೀಯ ಗುಣಗಳಿರುತ್ತವೆ. ಇವುಗಳ ಸೂಕ್ತ ಬಳಕೆ ಹಾಗೂ ಸೇವನೆಯಿಂದ ವಿವಿಧ ವ್ಯಾದಿಗಳನ್ನು ಗುಣಪಡಿಸಬಹುದು. ಅಂತಹ ಒಂದು ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ಗಿಡಮೂಲಿಕೆಗಳಲ್ಲಿ ಅಮೃತ ಬಳ್ಳಿಯೂ ಒಂದು.

ಇದರ ಕಾಂಡ, ಎಲೆ ಹಾಗೂ ಬೇರುಗಳಿಂದ ಔಷಧಿಯನ್ನು ತಯಾರಿಸಲಾಗುವುದು.ಅಮೃತ ಬಳ್ಳಿಯನ್ನು ಜಜ್ಜಿ ನೀರಿನಲ್ಲಿ ನೆನೆಹಾಕಿ. ನಂತರ ನೀರನ್ನು ಸೋಸಿ ಕುಡಿಯುವುದರಿಂದ ಶರೀರದಲ್ಲಿ ಬಲವನ್ನು ಪಡೆದುಕೊಳ್ಳಬಹುದು. ಚೈತನ್ಯ ದೊರೆಯುವುದು. ಹೃದಯಕ್ಕೆ ಹಿತಕರವಾದದ್ದು. ತ್ರಿದೋಷಗಳನ್ನು ಶಮನ ಮಾಡುವಂತಹದ್ದು.

ಹೊಟ್ಟೆಯಲ್ಲಿ ಉಂಟಾಗುವ ಅನೇಕ ತೊಂದರೆಗಳ ನಿವಾರಣೆ

ಅಮೃತ ಬಳ್ಳಿಯ ಒಂದು ಹಸಿ ತುಂಡು, ಬೇವಿನ ಚಿಗುರು ಎಲೆ, ಸ್ವಲ್ಪ ಹಿಪ್ಪಲಿ. ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ಹಾಕಿ. – ರಾತ್ರಿ ನೀರಿನಲ್ಲಿ ನೆನೆಯಲು ಬಿಡಿ. – ಮುಂಜಾನೆ ಸಾಮಾಗ್ರಿಗಳನ್ನು ನೀರಿನಿಂದ ಕಿವುಚಿ ತೆಗೆದು ಸೋಸಿ. – ಸೋಸಿಕೊಂಡ ದ್ರಾವಣಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ, ಕುಡಿಯಬೇಕು. – ನಿತ್ಯ ಮುಂಜಾನೆ ಮತ್ತು ರಾತ್ರಿ ಸೇರಿದಂತೆ ಎರಡು ಬಾರಿ ಸೇವಿಸಬೇಕು. – 10 ರಿಂದ 15 ದಿನಗಳಲ್ಲಿ ಹೊಟ್ಟೆಯಲ್ಲಿ ಉಂಟಾಗುವ ಹೊಟ್ಟೆ ಉಬ್ಬರ, ಹೊಟ್ಟೆ ಕಿವುಚಿದಂತಾಗುವುದು, ಹೊಟ್ಟೆ ಉರಿಯಂತಹ ಅನೇಕ ತೊಂದರೆಗಳು ಬಹುಬೇಗ ನಿವಾರಣೆಯಾಗುವವು.

ದೃಷ್ಟಿ ದೋಷಗಳನ್ನು ನಿವಾರಿಸಬಹುದು

ಅಮೃತ ಬಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. – ಒಂದು ಪಾತ್ರೆಯಲ್ಲಿ 2 ಲೋಟ ನೀರನ್ನು ಸೇರಿಸಿ. – ನೀರಿನ ಪಾತ್ರೆಗೆ ಅಮೃತ ಬಳ್ಳಿಯ ತುಂಡನ್ನು ಸೇರಿಸಿ, ಚೆನ್ನಾಗಿ ಕುದಿಸಿ. – ನಂತರ ದ್ರಾವಣವನ್ನು ಸೋಸಿ, ಸ್ವಲ್ಪ ತ್ರಿಫಲ ಚೂರ್ಣ ಹಾಗೂ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. – ಇದನ್ನು 45 ದಿನಗಳ ಕಾಲ ನಿತ್ಯವೂ ಸೇವಿಸುವುದರಿಂದ ದೃಷ್ಟಿ ದೋಷಗಳನ್ನು ನಿವಾರಿಸಬಹುದು. – ಚಿಕ್ಕ ಮಕ್ಕಳಲ್ಲಿ ದೃಷ್ಟಿ ದೋಷ ಇರುವವರು ಈ ಔಷಧವನ್ನು ಸೇವಿಸುವುದಿಂದ ದೃಷ್ಟಿ ದೋಷ ಬಹುಬೇಗ ನಿವಾರಣೆಯಾಗುವುದು.

ಇದನ್ನು ಓದಿ : ದ್ರಾಕ್ಷಿ ಎಷ್ಟು ಹುಳಿ ? ಎಷ್ಟು ಸಿಹಿ ?

ಕೂದಲು ಸೊಂಪಾಗಿ ಬೆಳೆಯುವುದು

ಅಮೃತ ಬಳ್ಳಿಯನ್ನು ಜಜ್ಜಿ, ನೀರಿಗೆ ಹಾಕಿ ಕುದಿಸಿ ಸಾಕಷ್ಟು ಇಂಗಿದ ಮೇಲೆ, ಸಮಪ್ರಮಾಣದಲ್ಲಿ ಎಳ್ಳೆಣ್ಣೆಯನ್ನು ಸೇರಿಸಿ. – ಪುನಃ ಕುದಿಸಿ, ಸ್ವಲ್ಪ ಕುದಿಯಲು ಪ್ರಾರಂಭಿಸಿದ ಬಳಿಕ ಪಚ್ಚ ಕರ್ಪೂರವನ್ನು ಸೇರಿಸಿ. – ನೀರಿನಂಶ ಹೋಗುವವರೆಗೆ ಕುದಿಸಬೇಕು. – ಸ್ವಲ್ಪ ಸಮಯ ಆರಲು ಬಿಟ್ಟು, ಸೋಸಿಕೊಳ್ಳಿ. – ಸೋಸಿದ ಎಣ್ಣೆಯನ್ನು ನಿತ್ಯವೂ ನೆತ್ತಿಗೆ ಅನ್ವಯಿಸಿಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಣೆಯಾಗುವುದು. ಕಣ್ಣಿಗೆ ತಂಪನ್ನು ನೀಡುವುದು ಹಾಗೂ ಮಿದುಳಿಗೆ ಉತ್ತಮ ಆರೈಕೆ ನೀಡುವುದು.

ಹುಳಿ ತೇಗು ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರ

ನೀರಿಗೆ ಅಮೃತ ಬಳ್ಳಿಯ ತುಂಡು ಮತ್ತು ತ್ರಿಫಲ ಚೂರ್ಣವನ್ನು ಸೇರಿಸಿ, ಕುದಿಸಿ. – ಕುದಿಸಿಕೊಂಡ ಕಷಾಯವನ್ನು ಸೋಸಿ ತೆಗೆದಿಟ್ಟುಕೊಳ್ಳಿ. ಗಣನೀಯವಾಗಿ ಈ ಕಷಾಯವನ್ನು ಸೇವಿಸುತ್ತಾ ಬಂದರೆ ಹಿಳಿತೇಗು ಅಥವಾ ಗ್ಯಾಸ್ಟ್ರಿಕ್ ಅಂತಹ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದು.

ದೇಹದ ತೂಕ ಇಳಿಕೆಯಾಗುವುದು

ಅಮೃತ ಬಳ್ಳಿಯ ತುಂಡು ಮತ್ತು ತ್ರಿಫಲ ಚೂರ್ಣವನ್ನು ಸೇರಿಸಿ, ಕುದಿಸಿ. – ಕುದಿಸಿ ಸೋಸಿಕೊಂಡ ಕಷಾಯಕ್ಕೆ ಲೋಹ ಬಸ್ಮ ಮತ್ತು ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. – 45 ದಿನಗಳ ಕಾಲ ಗಣನೀಯವಾಗಿ ಕಷಾಯವನ್ನು ಸೇವಿಸುವುದರಿಂದ ದೇಹದ ತೂಕ ಇಳಿಯುವುದು.

ಮಧುಮೇಹ ನಿಯಂತ್ರಣ

ಕೆಲವರು ನಿತ್ಯ ಒಂದು ಅಮೃತ ಬಳ್ಳಿಯ ಎಲೆಯನ್ನು ಸೇವಿಸುವುದರ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ. ಬಿಲ್ವ ಪತ್ರೆಯನ್ನು ರುಬ್ಬಿ ರಸವನ್ನಾಗಿ ಮಾಡಿಕೊಳ್ಳಿ. – ಬಿಲ್ವಪತ್ರೆಯ ರಸಕ್ಕೆ ಅಮೃತ ಬಳ್ಳಿಯ ಪುಡಿ(ಎಲೆ ಒಣಗಿಸಿ ಪುಡಿ ಮಾಡುವುದು) ಮತ್ತು ನೇರಳೆ ಬೀಜದ ಪುಡಿಯನ್ನು ಸಮ ಪ್ರಮಾಣದಲ್ಲಿ ಸೇರಿಸಿ, ಮಿಶ್ರಗೊಳಿಸಿ. – ನಿತ್ಯವೂ ಈ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿಡುವುದು.

ಇದನ್ನು ಓದಿ : ಕ್ಯಾರೆಟ್ ನ 5 ಉಪಯೋಗಗಳು : Top 5 Uses of Carrot

ಒಟ್ಟಾರೆ ಅಮೃತ ಬಳ್ಳಿಯು ಮಾನವನಿಗೆ ದೇವರು ನೀಡಿರುವ ಅಮೃತವಾಗಿದ್ದು, ಹಲವಾರು ರೋಗಗಳು ಬಾರದಂತೆ ನಿಯಂತ್ರಿಸುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಶಕ್ತಿಯ ಕೇಂದ್ರವಾಗಿದ್ದು, ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ನಿಮ್ಮ ಕೋಶಗಳನ್ನು ಆರೋಗ್ಯಕರವಾಗಿರಿಸಿ ರೋಗಗಳನ್ನು ತೊಡೆದು ಹಾಕುತ್ತದೆ. ಇದು ರಕ್ತವನ್ನು ಶುದ್ಧೀಕರಿಸಿ, ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.

Copyright © All rights reserved Newsnap | Newsever by AF themes.
error: Content is protected !!