25 ಕೋಟಿ ಅಕ್ರಮ: ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಎಂಡಿ ಸುರೇಶ್‌ ಕುಮಾರ್‌ ಅಮಾನತ್ತು

Team Newsnap
1 Min Read

ಅಂಬೇಡ್ಕರ್‌​​ ಅಭಿವೃದ್ಧಿ ನಿಗಮದ MD ​ ಸುರೇಶ್ ಕುಮಾರ್ ಅವರನ್ನು ಸರ್ಕಾರ ಭ್ರಷ್ಟಾಚಾರ ಆರೋಪದಡಿ ಅಮಾನತು ಮಾಡಿದೆ.

ಕೆ.ಎಂ. ಸುರೇಶ್‌ ಕುಮಾರ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, 25 ಕೋಟಿ ಅಕ್ರಮ ಎಸಗಿದ ಆರೋಪದ ಮೇಲೆ ಅಮಾನತು ಆಗಿದ್ದಾರೆ. ಭ್ರಷ್ಟಾಚಾರ, ದುರ್ನಡತೆ ಮತ್ತು ಕರ್ತವ್ಯಲೋಪ ಆರೋಪ, ಇಲಾಖಾ ವಿಚಾರಣೆ ಬಾಕಿ ಇರಿಸಿ KAS (ಆಯ್ಕೆ ಶ್ರೇಣಿ) ಅಧಿಕಾರಿ ಸಸ್ಪೆಂಡ್ ಆಗಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಅಮಾನತುಗೊಳಿಸಿದ್ದಾರೆ.

ಇದನ್ನು ಓದಿ – ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ಆರೋಪಗಳೇನು ?

  • ಅರ್ಜಿಯನ್ನೇ ಸಲ್ಲಿಸದ 92 ಫಲಾನುಪೇಕ್ಷಿಗಳಿಗೆ ಸೌಲಭ್ಯ ನೀಡಿದ್ದಾರೆ
  • ಐರಾವತ ಮತ್ತು ಸಮೃದ್ಧಿ ಯೋಜನೆಗಳಲ್ಲಿ ಅರ್ಜಿ ಹಾಕದವರಿಗೆ ಮಂಜೂರಾತಿ ಮಾಡಿದ್ದರು.
  • ಗಂಗಾ ಕಲ್ಯಾಣ ಯೋಜನೆಯಡಿ ಜಿಎಸ್​ಟಿ ಮೊತ್ತ ಅಕ್ರಮವಾಗಿ ನೀಡಿ 3.5 ಕೋಟಿ ನಷ್ಟವಾಗಿದೆ.
  • ಶಾಸಕರ ಅನುಮೋದನೆ ಇಲ್ಲದೇ 5000 ಮಂದಿ ಆಯ್ಕೆ ಮಾಡಿ 25 ಕೋಟಿ ನಷ್ಟವಾಗಿದೆ.

ಹಲವು ಅಕ್ರಮ ಮಾಡಿರುವ ಆರೋಪದಡಿ ಸುರೇಶ್​ಕುಮಾರ್​ ಸಸ್ಪೆಂಡ್​ ಆಗಿದ್ದಾರೆ.

Share This Article
Leave a comment