ಸಚಿವರಿಗೆ ಖಾತೆ ಹಂಚಿಕೆ ಅಧೀಕೃತ – ರಾಜ್ಯಪತ್ರದಲ್ಲಿ ಪ್ರಕಟ : ಖಾತೆಗಳಲ್ಲಿ ಕೊಂಚ ಅದಲು – ಬದಲು

Team Newsnap
2 Min Read

ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಖಾತೆಗಳನ್ನು ಅಧೀಕೃತವಾಗಿ ಹಂಚಿಕೆ ಮಾಡಲಾಗಿದೆ.

ಸಿಎಂ ಕಳುಹಿಸಿದ್ದ ಪಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ ತಕ್ಷಣವೇ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.

ಸಾರಿಗೆ ಖಾತೆಯಿಂದ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿಗೆ ಸಾರಿಗೆ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆ ನೀಡಲಾಗಿದೆ.

ಸಮಾಜ ಕಲ್ಯಾಣ ಅಥವಾ ಕಂದಾಯ ಖಾತೆ ಬಗ್ಗೆ ಒಲವು ಹೊಂದಿದ್ದರೆನ್ನಲಾದ ಕೆ.ಹೆಚ್ ಮುನಿಯಪ್ಪಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಜೊತೆಗೆ ಗ್ರಾಹಕ ವ್ಯವಹಾರಗಳ ಖಾತೆ ಜವಾಬ್ದಾರಿ ನೀಡಲಾಗಿದೆ.

ಡಿಸಿಎಂ ಡಿಕೆಶಿಗೆ ಬೆಂಗಳೂರು ನಗರ ಅಭಿವೃದ್ಧಿ, ಜಲಸಂಪನ್ಮೂಲ, ಆರ್.ಬಿ.ತಿಮ್ಮಾಪುರ ಬಳಿ ಇದ್ದ ಮುಜರಾಯಿ ಖಾತೆ ರಾಮಲಿಂಗಾ ರೆಡ್ಡಿಗೆ ಹೆಚ್ಚುವರಿ ಖಾತೆಯಾಗಿ ನೀಡಲಾಗಿದೆ. ಎಂಬಿ ಪಾಟೀಲ್‍ಗೆ ಹೆಚ್ಚುವರಿ ಆಗಿ ನೀಡಲಾಗಿದ್ದ ಐಟಿಬಿಟಿ ಸಿಎಂ ಬಳಿಯೇ ಉಳಿಸಿಕೊಂಡಿದ್ದಾರೆ.

ಎಂ.ಸಿ.ಸುಧಾಕರ್ ಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ. ಮೊದಲು ವೈದ್ಯಕೀಯ ಶಿಕ್ಷಣ ನೀಡಲಾಗಿತ್ತು. ಶರಣ ಪ್ರಕಾಶ್ ಪಾಟೀಲ್‍ಗೆ ವೈದ್ಯಕೀಯ ಶಿಕ್ಷಣ ನೀಡಲಾಗಿದೆ. ಮೊದಲು ಉನ್ನತ ಶಿಕ್ಷಣ ಖಾತೆ ನೀಡಲಾಗಿತ್ತು ಎರಡು ಖಾತೆಯನ್ನ ಇಬ್ಬರಿಗೆ ಅದಲು ಬದಲು ಮಾಡಲಾಗಿದೆ.

ಯಾರಿಗೆ ಯಾವ ಖಾತೆ..?:

  • ಸಿದ್ದರಾಮಯ್ಯ – ಹಣಕಾಸು, ಸಂಪುಟ ವ್ಯವಹಾರ, ಡಿಪಿಎಆರ್, ಗುಪ್ತಚರ, ವಾರ್ತಾ ಇಲಾಖೆ, ಐಟಿಬಿಟಿ
  • ಡಿಕೆಶಿ – ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ
  • ಪರಮೇಶ್ವರ್ – ಗೃಹ ಇಲಾಖೆ
  • ಹೆಚ್.ಕೆ.ಪಾಟೀಲ್ – ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ
  • ಕೆ.ಎಚ್.ಮುನಿಯಪ್ಪ – ಆಹಾರ ಮತ್ತು ನಾಗರಿಕ ಸರಬರಾಜು
  • ಕೆ.ಜೆ.ಜಾರ್ಜ್ – ಇಂಧನ
  • ಎಂ.ಬಿ.ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕಾ
  • ರಾಮಲಿಂಗಾರೆಡ್ಡಿ – ಸಾರಿಗೆ-ಮುಜರಾಯಿ
  • ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಇಲಾಖೆ
  • ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
  • ಜಮೀರ್ ಅಹಮದ್ – ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ
  • ಕೃಷ್ಣಬೈರೇಗೌಡ – ಕಂದಾಯ ಇಲಾಖೆ
  • ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಚಲುವರಾಯಸ್ವಾಮಿ – ಕೃಷಿ ಇಲಾಖೆ
  • ಕೆ. ವೆಂಕಟೇಶ್- ಪಶು ಸಂಗೋಪನೆ, ರೇಷ್ಮೆ
  • ಡಾ.ಹೆಚ್.ಸಿ ಮಹದೇವಪ್ಪ – ಸಮಾಜ ಕಲ್ಯಾಣ
  • ಈಶ್ವರ್ ಖಂಡ್ರೆ – ಅರಣ್ಯ ಮತ್ತು ಪರಿಸರ
  • ಕೆ.ಎನ್.ರಾಜಣ್ಣ – ಸಹಕಾರ

Share This Article
Leave a comment