December 28, 2024

Newsnap Kannada

The World at your finger tips!

ali akbar

ಮಲಯಾಳಂ ನಿರ್ದೇಶಕ ಅಲಿ ಅಕ್ಬರ್. ಮುಸ್ಲಿಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರ

Spread the love

ಮಲಯಾಳಂ ಚಿತ್ರರಂಗದ ನಿರ್ದೇಶಕ ಅಲಿ ಅಕ್ಬರ್ ಹಾಗೂ ಅವರ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಲಿ ಅಕ್ಬರ್​ ತಾವು ಹಿಂದೂ ಧರ್ಮಕ್ಕೆ ಮತಾಂತರ​ ಆಗುವುದಾಗಿ ಹೇಳಿಕೊಂಡಿದ್ದರು.

ಅದರಂತೇ ಇದೀಗ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಹಿಂದೂ ಸೇವಾ ಕೇಂದ್ರದ ಸ್ಥಾಪಕ ಪ್ರತೀಶ್​ ವಿಶ್ವನಾಥ್​ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಅಲಿ ಅಕ್ಬರ್ ಪೂಜೆ, ಹೋಮ ಮಾಡುವ ಫೋಟೋಗಳನ್ನು ಶೇರ್​ ಮಾಡಿ “ಇತಿಹಾಸ ಈಗ ತಾನಾಗಿಯೇ ಮರುಕಳಿಸುತ್ತಿದೆ. ಅಲಿ ಅಕ್ಬರ್​ ಈಗ ರಾಮಸಿಂಹನ್” ಎಂದು ಬರೆದುಕೊಂಡಿದ್ದಾರೆ.

ಹಿಂದೂ ಧರ್ಮಕ್ಕೆ ಮತಾಂತರ​ ಆದ ನಂತರ ಅಲಿ ಅಕ್ಬರ್​ ತಮ್ಮ ಹೆಸರನ್ನು ರಾಮಸಿಂಹನ್ ಎಂದು ಬದಲಾಯಿಸಿಕೊಂಡಿದ್ದಾರೆ.

ಅಲಿ ಅಕ್ಬರ್​ ಅವರು ಹಿಂದೂ ಧಮಕ್ಕೆ ಯಾವ ಉದ್ದೇಶಕ್ಕಾಗಿ ಮತಾಂತರ ಆಗಲು ಬಯಸಿದ್ದರು ಎಂಬುದನ್ನು ಕೂಡ ಅವರು ಈ ಹಿಂದೆಯೇ ತಿಳಿಸಿದ್ದರು.

ಮಿಲಿಟರಿ ಅಧಿಕಾರಿ ಬಿಪಿನ್​ ರಾವತ್ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳಿಗೆ ಕೆಲವು ಮುಸ್ಲಿಮರು ಖುಷಿಯ ಎಮೋಜಿಗಳ ಕಮೆಂಟ್​ ಮಾಡಿದ್ದನ್ನು ಅಲಿ ಅಕ್ಬರ್ ಖಂಡಿಸಿದ್ದರು.

ಬಿಪಿನ್​ ರಾವತ್​ ಅವರ ಸಾವಿಗೆ ಅಗೌರವ ಸೂಚಿಸಿದ ಕೆಲವು ದೇಶವಿರೋಧಿ ಮುಸ್ಲಿಮರ ಕೃತ್ಯವನ್ನು ಯಾವುದೇ ಮುಸ್ಲಿಂ ನಾಯಕರೂ ಖಂಡಿಸಿಲ್ಲ ಈ ಬಗ್ಗೆ ಅಲಿ ಅಕ್ಬರ್ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕಾರಣಕ್ಕಾಗಿ ಮುಸ್ಲಿಂ ಧರ್ಮದಲ್ಲಿನ ನಂಬಿಕೆಯನ್ನು ಕೈ ಬಿಡುವುದಾಗಿ ಅಲಿ ಅಕ್ಬರ್​ ಹೇಳಿದ್ದರು.

Copyright © All rights reserved Newsnap | Newsever by AF themes.
error: Content is protected !!