ಮಂಡ್ಯದ ಮುಸ್ಕಾನ್ ಳನ್ನು ಹಾಡಿ ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ ಹಾಗೂ ಜಾಗತಿಕ ಭಯೋತ್ಪಾದಕ ಗುಂಪು ಅಲ್ ಖೈದಾದ ನಾಯಕ ಅಯ್ಮಾನ್ ಅಲ್ ಜವಾಹಿರಿ ಭಾರತೀಯ ಮುಸ್ಲಿಂರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾನೆ.
ಒಂಬತ್ತು ನಿಮಿಷಗಳ ವೀಡಿಯೋ ಇರುವ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ವೀಡಿಯೋದಲ್ಲಿ ಮಂಡ್ಯದಲ್ಲಿ ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದ ಮುಸ್ಕಾನ್ ಖಾನ್‍ನ್ನು ಹೊಗಳಿದ್ದಾನೆ. ಮುಸ್ಕಾನ್ ಖಾನ್ ಬುರ್ಖಾ ಧರಿಸುವವರನ್ನು ವಿರೋಧಿಸುವವರ ವಿರುದ್ಧವೇ ಅಲ್ಲಾಹು ಅಕ್ಬರ್ ಎಂದು ಕೂಗುವ ಮೂಲಕ ಅವರ ಜೈ ಶ್ರೀರಾಮ್ ಘೋಷಣೆಯನ್ನು ವಿರೋಧಿಸಿದ್ದಾಳೆ ಎಂದು ಶ್ಲಾಘಿಸಿದ್ದಾನೆ.
ದಿ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಬರೆಯಲಾದ ಪೋಸ್ಟರ್‌ನ ಶೀರ್ಷಿಕೆಯಿರುವ ವೀಡಿಯೋದಲ್ಲಿ ಮುಸ್ಕಾನ್‍ನನ್ನು ಹೊಗಳಿ ರಚಿಸಿದ ಕವನವನ್ನು ಓದಿದ್ದಾನೆ.
ಈ ಕವಿತೆಯಲ್ಲಿ ಮುಸ್ಕಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ವೀಡಿಯೋಗಳನ್ನು ನೋಡುವ ಮೂಲಕ ತಿಳಿದುಕೊಂಡಿದ್ದೇನೆ. ಇವಳಿಂದ ತುಂಬಾ ಪ್ರಭಾವಿತರಾಗಿದ್ದೇನೆ ಎಂಬ ಸಾಲಿದೆ.
ಕವಿತೆ ಓದಿದ ನಂತರ ಫ್ರಾನ್ಸ್ ಹಾಗೂ ಈಜಿಪ್ಟ್ ಸೇರಿದಂತೆ ಹಿಜಬ್ ನಿಷೇಧಿಸಿದ ದೇಶಗಳ ಮೇಲೆ ಕಿಡಿಕಾರಿದ್ದಾನೆ.
ನವೆಂಬರ್ 2021ರ ಒಂದು ವೀಡಿಯೊದಲ್ಲಿ, ವಿಶ್ವಸಂಸ್ಥೆ ಒಡ್ಡುವ ಬೆದರಿಕೆಗಳ ಬಗ್ಗೆ ಇಸ್ಲಾಮಿಕ್ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದ. ಈತ ಎಲ್ಲಿದ್ದಾನೆ ಎಂಬ ವಿಚಾರ ತಿಳಿದು ಬಂದಿಲ್ಲ. ಸದ್ಯ ಈತ ಅಫ್ಘಾನಿಸ್ತಾನಲ್ಲಿ ಇದ್ದಾನೆ ಎಂದು ಮೂಲಗಳು ತಿಳಿಸಿವೆ.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ