ವಾಯುಪಡೆ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿ ಅನುಮಾನಾಸ್ಪದ ಸಾವು: 6 ಮಂದಿ ಸಿಬ್ಬಂದಿ ವಿರುದ್ಧ FIR

Team Newsnap
1 Min Read
Air Force Technical student suspicious death: FIR against 6 ವಾಯುಪಡೆ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿ ಅನುಮಾನಾಸ್ಪದ ಸಾವು: 6 ಮಂದಿ ಸಿಬ್ಬಂದಿ ವಿರುದ್ಧ FIR

ಬೆಂಗಳೂರಿನ ಜಾಲಹಳ್ಳಿಯ ವಾಯುಪಡೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಅಂಕಿತ್‌ ಕುಮಾರ್ ‌ ಝಾ (27) ಕಳೆದ ಮಧ್ಯರಾತ್ರಿ ನಂತರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಕಾಲೇಜಿನ ಆರು ಮಂದಿ ಸಿಬ್ಬಂದಿ ಮೇಲೆ ಹತ್ಯೆ ಮೊಕದ್ದಮೆ ದಾಖಲಿಸಲಾಗಿದೆ. ಆರು ಶಂಕಿತರು ಏರ್ ಕಮೋಡೋರ್, ಗ್ರೂಪ್ ಕ್ಯಾಪ್ಟನ್ ಮತ್ತು ವಿಂಗ್ ಕಮಾಂಡರ್ ಶ್ರೇಣಿಯವರು.

ಇದುವರೆಗೂ ಯಾರನ್ನೂ ಬಂಧಿಸಿಲ್ಲ.ನಾನು ಆರೋಗ್ಯವಾಗಿದ್ದೇನೆ: ಶೀಘ್ರದಲ್ಲೇ ಪಕ್ಷದ ಕಚೇರಿಗೆ ಬರುವೆ – HDD ಸಂದೇಶ

ಗುರುವಾರ ಬೆಳಗಿನ ಜಾವ 2.20ರ ಸುಮಾರಿಗೆ ಪಶ್ಚಿಮ ದೆಹಲಿಯ ಉತ್ತಮ್ ನಗರದ ನಿವಾಸಿಯಾದ ಮೃತನ ಸಹೋದರ ಅಮನ್ ಝಾ ನೀಡಿದ ದೂರಿನ ಆಧಾರದ ಮೇಲೆ ಗಂಗಮ್ಮನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮೃತ ವಿದ್ಯಾರ್ಥಿ ಝಾ ಏಳು ಪುಟಗಳ ಡೆತ್ ನೋಟ್ ನ್ನು ಬರೆದಿಟ್ಟು, ಎಲ್ಲಾ ಆರು ಶಂಕಿತರ ಹೆಸರನ್ನು ಉಲ್ಲೇಖಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದರೆ ಮರಣೋತ್ತರ ಪರೀಕ್ಷೆ ವರದಿಯಿಂದ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಈ ಪ್ರಕರಣ ಕುರಿತು ಮಾತನಾಡಿ, ಮೃತನ ಸೋದರ ಸಂಬಂಧಿ ರಿಚಾ ಠಾಕೂರ್, ಝಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ .

ಝಾ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದರಿಂದ ಅವರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು.

ಜುಲೈನಲ್ಲಿ ಅವರನ್ನು ವಜಾಗೊಳಿಸಲಾಯಿತು. ನನಗೆ ಫೋನ್ ಮೂಲಕ ಕರೆ ಮಾಡಿ ಕೆಲವು ದಾಖಲೆಗಳಿಗೆ ಬಲವಂತವಾಗಿ ಸಹಿ ಮಾಡಲಾಗುತ್ತಿದೆ ಎಂದು ಅಂಕಿತ್ ಹೇಳಿದ್ದರು ಎಂದು ರಿಚಾ ಠಾಕೂರ್ ತಿಳಿಸಿದ್ದಾರೆ.

ಸಂಜೆ 4.30ರ ಸುಮಾರಿಗೆ ಕೊಚ್ಚಿಯಲ್ಲಿದ್ದ ತನ್ನ ಸಹೋದರ ಅಮನ್‌ಗೆ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಠಾಕೂರ್ ತಿಳಿಸಿದ್ದಾರೆ.

Share This Article
Leave a comment