ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಈಗ ಅಹಿಂದ ಮಂತ್ರವೇ ಮುಳುವಾಗಿ ಪರಿಣಮಿಸುತ್ತಿದೆ. ಸಿದ್ದು ವಿರುದ್ಧವೇ ಕುರುಬ ಸಮಾಜದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ಸಿದ್ದರಾಮಯ್ಯ ವಿರುದ್ಧ ಯಾದಗಿರಿ ಕುರುಬ ಸಮಾಜ ತೀವ್ರವಾಗಿ ತಮ್ಮ ಆಕ್ರೋಶ ಹೊರ ಹಾಕಿದೆ.
ಯಾದಗಿರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕುರುಬ ಸಮಾಜದ ವಿವಿಧ ಸಂಘಗಳ ಮುಖಂಡರು ಮತ್ತು ಸಂಗೊಳ್ಳಿ ರಾಯಣ್ಣ ಸಂಘದ ಜಿಲ್ಲಾಧ್ಯಕ್ಷ ಭೀಮರಾಯ ಬಂಡಾರಿ ಸಿದ್ದರಾಮಯ್ಯ ಅವರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.
ಕುರುಬ ಸಮಾಜದಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟು ಬೇರೆ ಯಾರನ್ನು ಬೆಳೆಯಲು ಬಿಡುತ್ತಿಲ್ಲ. ಕುರುಬ ಸಮಾಜದಲ್ಲಿ ರಾಜಕೀಯ ಆಸಕ್ತರು ಅವರೊಬ್ಬರೇ ಅಲ್ಲ, ಇನ್ನೂ ತುಂಬ ಜನ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ನಮ್ಮ ಸಮಾಜದಲ್ಲಿನ ಮುಖಂಡರನ್ನು ಗುರುತಿಸುವ ಕಾರ್ಯ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಇದ್ದರೆ ಕುರುಬರ ಮತ ಪಡೆಯಬಹುದು ಅಂತ ತಿಳಿದುಕೊಂಡಿದೆ. ಆದರೆ ಇದು ಅವರ ಭ್ರಮೆ. ಸಿದ್ದರಾಮಯ್ಯ ಅವರು ನಮ್ಮ ಸಮಾಜಕ್ಕೆ ಏನು ಮಾಡಿಲ್ಲ ಅಂದ ಮೇಲೆ ಅವರ ಜೊತೆಗೆ ನಾವು ಏಕೆ ಇರಬೇಕು ಎಂದು ಪ್ರಶ್ನೆ ಮಾಡಿದರು
ಇನ್ನ ಮೇಲೆ ನಾವು ಏನು ಎಂದು ಕುರುಬ ಸಮಾಜ ತೋರಿಸುತ್ತದೆ. ಈಗ ನಮಗೆ ಗೊತ್ತಾಗಿದೆ, ಇವಾಗ ನೋಡಿ ಎಂದು ಸವಾಲನ್ನು ಹಾಕಿದರು.
- ಹಸುಗಳ ಕೆಚ್ಚಲು ಕೊಯ್ದಆರೋಪಿ ಬಂಧನ : ಜ.24 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ
- ದುಬೈ ಕಾರ್ ರೇಸ್ನಲ್ಲಿ ನಟ ಅಜಿತ್ ಕುಮಾರ್ ಭರ್ಜರಿ ಸಾಧನೆ
- ಮಿಸೆಸ್ ಇಂಡಿಯಾ ಕಿರೀಟ ಗೆದ್ದ ಮದ್ದೂರಿನ ಡಾ. ಪ್ರಿಯಾ ಗೋಸ್ವಾಮಿ
- BCCI ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಆಯ್ಕೆ
- ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
More Stories
ಹಸುಗಳ ಕೆಚ್ಚಲು ಕೊಯ್ದಆರೋಪಿ ಬಂಧನ : ಜ.24 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ
ದುಬೈ ಕಾರ್ ರೇಸ್ನಲ್ಲಿ ನಟ ಅಜಿತ್ ಕುಮಾರ್ ಭರ್ಜರಿ ಸಾಧನೆ
ಮಿಸೆಸ್ ಇಂಡಿಯಾ ಕಿರೀಟ ಗೆದ್ದ ಮದ್ದೂರಿನ ಡಾ. ಪ್ರಿಯಾ ಗೋಸ್ವಾಮಿ