ಮೈಸೂರು ಬಳಿ ನಕಲಿ ಗೊಬ್ಬರ ತಯಾರಿಕಾ ಅಡ್ಡೆ ಮೇಲೆ ಕೃಷಿ ಅಧಿಕಾರಿಗಳ ದಾಳಿ

Team Newsnap
1 Min Read

ಮೈಸೂರು ಸಮೀಪ ನಕಲಿ ಗೊಬ್ಬರ ತಯಾರಿಕೆ ಅಡ್ಡೆಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು

ಮಂಡಕಳ್ಳಿ ಬಳಿಯ ಹಳೆ ಕೋಳಿ ಫಾರಂ ಒಂದರಲ್ಲಿ ನಕಲಿ ಗೊಬ್ಬರ ತಯಾರಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರಿಸಿ ಮೈಸೂರು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಧುಲತಾ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ‌ ನಡೆಸಿದರು. ಜು.30ರಂದು CET ಫಲಿತಾಂಶ – ಸಚಿವ ಅಶ್ವತ್ಥನಾರಾಯಣ

ಈ ದಾಳಿಯ ವೇಳೆ ಹಲವು ಸಲಕರಣೆಗಳು ಪತ್ತೆಯಾಗಿವೆ. ಅಸಲಿ ಗೊಬ್ಬರಕ್ಕೆ ಮಿಶ್ರಣ ಮಾಡಲು ಶೇಖರಿಸಿಟ್ಟಿದ್ದ ಜೇಡಿಮಣ್ಣಿನ ಚೀಲಗಳು, ಯಂತ್ರೋಪಕರಣಗಳು ಪತ್ತೆಯಾಗಿವೆ.ಈ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನು ಓದಿ – ಸಿದ್ದರಾಮಯ್ಯ ಹೊಳೆಯುವ ವಜ್ರ: ಸಿದ್ದು ಬೆಂಬಲಕ್ಕೆ ನಿಂತ ಎಚ್. ವಿಶ್ವನಾಥ್ ಪುತ್ರ ಅಮಿತ್

ಈ ಹಳೇ ಕೋಳಿ ಫಾರಂ ಬಾಡಿಗೆಗೆ ಪಡೆದು ನಕಲಿ ಗೊಬ್ಬರ ತಯಾರಿಸಲಾಗುತ್ತಿತ್ತು. ಮೈಸೂರು ಮೂಲದ ಮಹೇಶ್ ಎಂಬ ವ್ಯಕ್ತಿಯಿಂದ ನಕಲಿ ಗೊಬ್ಬರ ತಯಾರಿಕೆ ದಂಧೆ ನಡೆಯುತ್ತಿತ್ತು.

ಜು.30ರಂದು ಸಿಇಟಿ ಫಲಿತಾಂಶ – ಸಚಿವ ಅಶ್ವತ್ಥನಾರಾಯಣ

ಜೂನ್ ಮಧ್ಯಭಾಗದಲ್ಲಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಜುಲೈ 30ರಂದು ಪ್ರಕಟಿಸಲಾಗುವುದು

ಈ ವಿಷಯವನ್ನುಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಪ್ರಕಟಿಸಿ
ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದುಕೊಳ್ಳಲು ನಡೆದಿದ್ದ ಸಿಇಟಿ ಪರೀಕ್ಷೆಯನ್ನು ಈ ಬಾರಿ ಬಿಗಿ ಭದ್ರತೆ ನಡುವೆ ಕಟ್ಟುನಿಟ್ಟಾಗಿ ನಡೆಸಲಾಗಿತ್ತು ಎಂದರು.

ಸಿಇಟಿ ಪರೀಕ್ಷೆ ನಡೆಸುವಾಗ ಸಿಬಿಎಸ್ ಸಿ ಮತ್ತು ಐಸಿಎಸ್‌ಇ ಪಠ್ಯಕ್ರಮದಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೂ ಅವಕಾಶ ಕೊಡಲಾಗಿತ್ತು. ಈಗ ಅವರ ಫಲಿತಾಂಶ ಬಂದಿದೆ ಸಿಇಟಿ ಬರೆದಿದ್ದ ಈ ವಿದ್ಯಾರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ತಮ್ಮ ಅಂಕಗಳನ್ನು ನಾಳೆ (ಜು.26) ಸಂಜೆಯೊಳಗೆ ಅಪ್ಲೋಡ್ ಮಾಡಬೇಕು ಎಂದು ಅವರು ಹೇಳಿದ್ದಾರೆ.

Share This Article
Leave a comment