November 23, 2024

Newsnap Kannada

The World at your finger tips!

Farm , agriculture , Fare

Agriculture fair on Dec 2-3 at VC Farm: New Breeds, Technology Unveiled: Dr.N.Shivakumar ವಿ ಸಿ ಫಾರಂನಲ್ಲಿ ಡಿ.2-3 ರಂದು ಕೃಷಿ ಮೇಳ: ಹೊಸ ತಳಿಗಳು,ತಂತ್ರಜ್ಞಾನ ಅನಾವರಣ: ಡಾ.ಎನ್.ಶಿವಕುಮಾರ್

ವಿ ಸಿ ಫಾರಂನಲ್ಲಿ ಡಿ.2-3 ರಂದು ಕೃಷಿ ಮೇಳ: ಹೊಸ ತಳಿಗಳು,ತಂತ್ರಜ್ಞಾನ ಅನಾವರಣ: ಡಾ.ಎನ್.ಶಿವಕುಮಾರ್

Spread the love

ಮಂಡ್ಯ ವಿ.ಸಿ.ಫಾರಂ ನ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರವು ಡಿಸೆಂಬರ್ 2 ಹಾಗೂ 3 ರಂದು ರೈತರಿಗಾಗಿ ಕೃಷಿ ಮೇಳವನ್ನು ವಿ.ಸಿ.ಫಾರಂ ಆವರಣದಲ್ಲಿ ಆಯೋಜಿಸಲಾಗಿದೆ.

ರೈತರಿಗೆ ಹೊಸ ತಂತ್ರಜ್ಞಾನ ಹಾಗೂ ತಳಿಗಳ ಮಾಹಿತಿ ನೀಡಲಾಗುವುದು ಎಂದು ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನ ನಿರ್ದೇಶಕ ಡಾ: ಎನ್ ಶಿವಕುಮಾರ್ ತಿಳಿಸಿದರು.PFI ಬ್ಯಾನ್ ಎತ್ತಿ ಹಿಡಿದ ಹೈಕೋರ್ಟ್ : ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿ ವಜಾ

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಐ.ಆರ್.64 ಭತ್ತದ ತಳಿ ಬಹಳಷ್ಟು ಸ್ಥಳ ಆವರಿಸಿಕೊಂಡಿತ್ತು. ಆದರೆ ಇದರಲ್ಲಿ ಬೆಂಕಿ ರೋಗ ಬರುವ ಸಾಧ್ಯತೆ. ಬೆಂಕಿ ರೋಗವನ್ನು ತಡೆಗಟ್ಟಿ ಕಡಿಮೆ ಅವಧಿಯಲ್ಲಿ ಬೆಳೆಯುವ ಕೆ.ಎಂ.ಪಿ 225 ಕಡಿಮೆ ಅವಧಿಯಲ್ಲಿ ಬೆಳೆಯುವ ಭತ್ತದ ಸುಧಾರಿತ ತಳಿಯನ್ನು ಬಿಡುಗಡೆ ಮಾಡಲಾಗಿದೆ ಇದರ ಜೊತೆಗೆ ಆರ್.ಎನ್.ಆರ್.15048 ಹೊಸ ಭತ್ತದ ತಳಿ, ಸಣ್ಣ ಕಾಳಿ ತಳಿಯಾಗಿದ್ದು, ಸೇವಿಸಲು ಚೆನ್ನಾಗಿರುತ್ತದೆ.ಈಗಾಗಲೇ ರೈತರು ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ಈ ರೀತಿಯ ಹೊಸ ತಳಿಗಳ ಪರಿಚಯ ಹಾಗೂ ಪ್ರಾತ್ಯಕ್ಷಿಕೆಗಳು ಕೃಷಿ ಮೇಳದ ಮುಖ್ಯ ಆಕರ್ಷಣೆಯಾಗಿರುತ್ತದೆ ಎಂದರು.

ಎA.ಎ.ಹೆಚ್.14-138 ಮುಸುಕಿನ ಜೋಳದ ಹೈಬ್ರೀಡ್ ತಳಿಯಾಗಿದೆ. ಎಲೆ ಅಂಗಮಾರಿ ರೋಗಕ್ಕೆ ಸಹಿಷ್ಣುತೆ, ಕೇದಿಗೆ ರೋಗಕ್ಕೆ ಸಾಧರಣಾ ಸಹಿಷ್ಣುತೆ ಹೊಂದಿರುತ್ತದೆ. ಇದನ್ನು ಪ್ರದರ್ಶನದಲ್ಲಿ ನೋಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಕೊರಲೆ ಎಂಬ ಧಾನ್ಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು ಸಂಪೂರ್ಣ ಒಣ ಪ್ರದೇಶದಲ್ಲಿ ನೀರು ಕಡಿಮೆ ಇರುವಂತ ಜಾಗದಲ್ಲಿಯು ಸಹ ಬೆಳೆಯಬಹುದಾದ ಧಾನ್ಯವಾಗಿದೆ ಇವುಗಳನ್ನು ಸಹ ಮೇಳದಲ್ಲಿ ನೋಡಬಹುದು

ಸಿ.ಎನ್.ಎಫ್.ಎಸ್-1 ಎಂಬ ಮೇವಿನ ಜೋಳದ ತಳಿ ಅಧಿಕ ನಾರು ಮತ್ತು ಪ್ರೊಟೀನ್ ಅಂಶ ಹೊಂದಿರುತ್ತದೆ ಮೇವಿಗಾಗಿ ಬೆಳೆಯಲಾಗುತ್ತಿದೆ. ಇದನ್ನು ಸಹ ರೈತರಿಗೆ ಪ್ರದರ್ಶನದಲ್ಲಿ ಇಡಲಾಗುವುದು. ಕ್ಷೇತ್ರ ಪ್ರಯೋಗದ ಮೂಲಕ ಭತ್ತದಲ್ಲಿ ಹೈಬ್ರೀಡ್ ತಳಿಯನ್ನ ರೈತರಿಗೆ ಹೊಸದಾಗಿ ಪರಿಚಯಿಸಿದ್ದೀವಿ. ವಿ.ಸಿ.ಫಾರಂನಲ್ಲಿ 17,000 ಕ್ಕೂ ಹೆಚ್ಚಿನ ತಳಿಗಳಿವೆ . ರೈತರಿಂದ ಬೇಡಿಕೆ ಇರುವ 100-150 ತಳಿಗಳನ್ನು ಸಂತತಿ ನಾಶವಾಗದಂತೆ ಉಳಿಸಿಕೊಳ್ಳಲಾಗಿದೆ ಅವುಗಳನ್ನು ನೋಡಬಹುದು ಎಂದರು.

ಸಭೆಯಲ್ಲಿ ಡೀನ್(ಕೃಷಿ) ಹಾಗೂ ಆವರಣದ ಮುಖ್ಯಸ್ಥ ಡಾ.ಎಸ್.ಎಸ್.ಪ್ರಕಾಶ್, ಕೃಷಿ ಮಹಾವಿದ್ಯಾಲಯದ ವಿಸ್ತೀರ್ಣ ವಿಭಾಗದ ಮುಖ್ಯಸ್ಥರಾದ ಡಾ.ರಂಗನಾಥ್, ಸಹ ವಿಸ್ತಾರಣಾ ನಿರ್ದೇಶಕರಾದ ಡಾ.ಡಿ.ರಘುಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಹೆಚ್.ನಿರ್ಮಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೃಷಿ ಮೇಳದ ಆಕರ್ಷಣೆಗಳು:

1) ಭತ್ತ ಕುರಿತಂತೆ ಸುಧಾರಿತ ತಳಿಗಳ ಹಾಗೂ ಹೈಬ್ರಿಡ್ ಗಳ ಪ್ರಾತ್ಯಕ್ಷಿಕೆ ಶ್ರೀ ಪದ್ಧತಿ ಹಾಗೂ ಏರೋಬಿಕ್ ಬತ್ತದ ಬೇಸಾಯ ಪ್ರಾತ್ಯಕ್ಷಿಕೆ ಡ್ರಮ್ಸನಿಂದ ಹಾಗೂ ಯಂತ್ರ ಚಾಲಿತ ನಾಟಿ ಪ್ರಾತ್ಯಕ್ಷಿಕೆ ಭತ್ತದಲ್ಲಿ ನೇರ ಬಿತ್ತನೆ ಪ್ರಾತ್ಯಕ್ಷಿಕೆ ಬಿಜೋತ್ಪಾದನಾ ತಾಕುಗಳು, ರಾಗಿ ಸಿರಿಧಾನ್ಯ ಕುರಿತಂತೆ ನೂತನರಾಗಿ ತಳಿಗಳ ಪ್ರಾತ್ಯಕ್ಷಿಕೆ ಹಾಗೂ ವಿವಿಧ ಸುಧಾರಿತ ಸಿರಿಧಾನ್ಯ ತಳಿಗ¼ನ್ನು ಪರಿಚಯಿಸಲಾಗುವುದು.

2) ವಾಣಿಜ್ಯ ಬೆಳೆಗಳ ಕುರಿತು ಸುಧಾರಿತ ಕಬ್ಬಿನ ತಳಿಗಳು ಅಂಗಾAಶ ಕೃಷಿ ತಂತ್ರಜ್ಞಾನದಲ್ಲಿ ರೋಗಮುಕ್ತ ಕಬ್ಬಿನ ಸಸಿಗಳ ಉತ್ಪಾದನೆ ಕಬ್ಬಿನಲ್ಲಿ ಆಧುನಿಕ ಬೇಸಾಯ ತಾಂತ್ರಿಕತೆಗಳು ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಯ ಪ್ರಾತ್ಯಕ್ಷಿಕೆ ಕಬ್ಬು ನಾಟಿ ಮಾಡುವ ಹಾಗೂ ತರಗೂ ಪುಡಿ ಮಾಡುವ ಯಂತ್ರಗಳ ಪ್ರಾತ್ಯಕ್ಷಿಕೆ ವಿವಿಧ ಹತ್ತಿ ತಳಿಗಳ ಪ್ರಾತ್ಯಕ್ಷಿಕೆ, ಬೇವಿನ ಬೆಳೆಗಳ ಕುರಿತು ವಿವಿಧ ಸುಧಾರಿತ ಮೇವಿನ ಬೆಳೆಗಳ ಸುಧಾರಿತ ತಳಿಗಳು ಹಾಗೂ ಉತ್ಪಾದನಾ ತಾಂತ್ರಿಕತೆಗಳು,ರಸ ಮೇವು ಮತ್ತು ಅಜೋಲಾ ಉತ್ಪಾದನೆ ಜಲ ಕೃಷಿಯಲ್ಲಿ ಬೇವಿನ ಉತ್ಪಾದನೆ, ದ್ವಿದಳ ಧಾನ್ಯ ಮತ್ತು ಎಣ್ಣೆ ಕಾಳು ಬೆಳೆಗಳ ಕುರಿತು ಮುದ್ದು ಅವರೇ ಸೋಯಾ ಅವರೇ ಹೆಸರು ಮತ್ತು ಅಲಸಂದೆ ಬೆಳೆಗಳ ಪ್ರಾತ್ಯಕ್ಷಿಕೆ ಸೂರ್ಯಕಾಂತಿ ಚೆಳ್ಳು ಹಾಗೂ ನೆಲಗಡಲೆ ಬೆಳೆಗಳ ಪ್ರಾತ್ಯಕ್ಷಿಕೆ

3) ನೀರು ನಿರ್ವಹಣಾ ತಂತ್ರಜ್ಞಾನ ಕುರಿತು ಸಂವೇದಿ ನೀರಾವರಿ ಪದ್ಧತಿ ವಿವಿಧ ಬೆಳೆಗಳಲ್ಲಿ ನೀರು ಉಳಿತಾಯ ಪದ್ಧತಿ ಪ್ರಾತ್ಯಕ್ಷಿಕೆಗಳು ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ ಪ್ರಾತ್ಯಕ್ಷಿಕೆಇತರೆ ತಾಂತ್ರಿಕತೆಗಳ ಕುರಿತು ಎರೆ ಗೊಬ್ಬರ ತಯಾರಿಕೆ ಪ್ರಾಧ್ಯಕ್ಷಿಕೆ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಸಮಗ್ರ ಮೀನು ಸಾಕಾಣಿಕೆ ಪದ್ಧತಿಗಳು ವಿವಿಧ ಸೊಪ್ಪು ತರಕಾರಿ ಹಾಗೂ ಹೂವಿನ ಬೆಳೆಗಳ ಪ್ರಾತ್ಯಕ್ಷಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ ಕೃಷಿ ಪ್ರಕಟಣೆಗಳು ಹಾಗೂ ಬಿತ್ತನೆ ಬೀಜಗಳ ಮಾರಾಟ ವಿವಿಧ ಅಭಿವೃದ್ಧಿ ಇಲಾಖೆ ಕಾರ್ಯಕ್ರಮಗಳು ನಡೆಯಲಿದೆ.

Copyright © All rights reserved Newsnap | Newsever by AF themes.
error: Content is protected !!