ಶ್ರದ್ಧಾಳ ಉಂಗುರ ತನ್ನ ಹೊಸ ಗೆಳತಿಗೆ ತೊಡಿಸಿದ್ದ ಅಫ್ತಾಬ್‌ : ಆಘಾತಕ್ಕೊಳಗಾದ ಮನೋವೈದ್ಯೆ!

Team Newsnap
1 Min Read

ಶ್ರದ್ಧಾ ಕೊಲೆ ಪ್ರಕರಣದ ಮತ್ತೊಂದು ಬೆಳವಣಿಗೆಯಲ್ಲಿ, ಆಫ್ತಾಬ್‌ನ ಇತ್ತೀಚಿನ ಗೆಳತಿ ಅವನ ಭೀಕರ ಕೃತ್ಯದ ಬಗ್ಗೆ ಕೇಳಿ ಆಘಾತಕ್ಕೊಳಗಾಗಿದ್ದಾಳೆ. ಅಫ್ತಾಬ್‌ನ ಛತ್ತರ್‌ಪುರ ನಿವಾಸಕ್ಕೆ ಎರಡು ಬಾರಿ ಭೇಟಿ ನೀಡಿದಾಗ ಶ್ರದ್ಧಾಳ ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿ ಇಡಲಾಗಿದೆ ಎಂಬ ಸುಳಿವು ನನಗೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾಳೆ.

ಅಫ್ತಾಬ್ ಅಕ್ಟೋಬರ್ 12 ರಂದು ಅಫ್ತಾಬ್ ತನಗೆ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾಗಿಯೂ ತಿಳಿಸಿದ್ದಾಳೆ. ಮೂಲಗಳ ಪ್ರಕಾರ, ಈ ಉಂಗುರ ಶ್ರದ್ಧಾಳದ್ದು ಎಂದು ತಿಳಿದುಬಂದಿದೆ.

ಪೊಲೀಸರು ಅಫ್ತಾಬ್‌ ಕೊಟ್ಟ ಉಂಗುರವನ್ನು ವಶಪಡಿಸಿಕೊಂಡಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅಫ್ತಾಬ್‌ನ ಹೊಸ ಗೆಳತಿ ವೃತ್ತಿಯಲ್ಲಿ ಮನೋವೈದ್ಯೆಯಾಗಿದ್ದಾರೆ. ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಆಫ್ತಾಬ್‌ಗೆ ಹೊಸ ಗೆಳತಿಯ ಪರಿಚಯವಾಗಿದೆ.

ಪೊಲೀಸರ ಪ್ರಕಾರ, ಅಫ್ತಾಬ್ ವಿವಿಧ ಡೇಟಿಂಗ್ ಸೈಟ್‌ಗಳ ಮೂಲಕ ಸುಮಾರು 15 ರಿಂದ 20 ಹುಡುಗಿಯರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದುಬಂದಿದೆ.

Share This Article
Leave a comment