ಅಗ್ನಿಪತ್ ಯೊಜನೆಯ ನೇಮಕಾತಿಗೆ ತೀವ್ರ ವಿರೋಧ : ಮಂಡ್ಯದಲ್ಲಿ – ಪ್ರತಿಭಟನೆ

Team Newsnap
2 Min Read

ಕೇಂದ್ರ ಸರ್ಕಾರದ ಅಗ್ನಿಪತ್ ಯೋಜನೆ ವಿರುದ್ಧ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿಯ ಮಂಡ್ಯ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಕಟುವಾಗಿ ಖಂಡಿಸಿತು.

ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ತಂದಿರುವ ಅಗ್ನಿಪಥ್ ಯೋಜನೆ ಯುವ ಜನಾಂಗದ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಪ್ರತಿಭಟನಾಕಾರರು ಜೈ ಜವಾನ್ ಜೈ ಕಿಸಾನ್ ಘೋಷಣೆ ಸ್ಪೂರ್ತಿಯನ್ನು ಧ್ವಂಸ ಮಾಡಲು ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ ಎಂದು ಟೀಕಿಸಿದ ಸಮಿತಿಯು ಈ ಹೋರಾಟದಲ್ಲಿ ಸೈನಿಕರ ಹೆಗಲಿಗೆ ಹೆಗಲಾಗಿ ನಿಂತುಕೊಳ್ಳುವುದು ರೈತ ಚಳುವಳಿಯ ಕರ್ತವ್ಯವಾಗಿದೆ ಎಂದು ಮೋರ್ಚಾದ ಮುಖಂಡರು ತಿಳಿಸಿದರು

ಗುತ್ತಿಗೆ ನೇಮಕಾತಿಯು ದೇಶದ ಭವಿಷ್ಯ ಭವಿಷ್ಯ ಜೊತೆಗೆ ಅಪಾಯಕಾರಿ ಪ್ರಯತ್ನವಾಗಿದೆ ಎಂದು ಟೀಕಿಸಿದ ಸಂಘಟನೆಯ ಮುಖಂಡ ಪುಟ್ಟಮಾದು ಅವರು ರಾಷ್ಟ್ರದ ಭದ್ರತೆಗೆ ಹಾಗೂ ನಿರುದ್ಯೋಗಿ ಯುವಕರ ಕನಸಿಗೆ ಕಲ್ಲು ಹಾಕುವುದಷ್ಟೇ ಅಲ್ಲದೆ ರೈತ ಕುಟುಂಬಗಳ ಕನಸಿಗೂ ಘಾಸಿ ಉಂಟು ಮಾಡಲಿದೆ ಎಂದು ಟೀಕಿಸಿದರು.

ಈ ದೇಶದ ಯೋಧರು ಅಂದರೆ ಸಮವಸ್ತ್ರ ಧರಿಸಿದ ರೈತರು ಎಂಬುದನ್ನು ಕೇಂದ್ರ ಸರ್ಕಾರ ಮನಗಾಣಬೇಕು ಎಂದು ಅಭಿಪ್ರಾಯಿಸಿದರು.
ಬಹುತೇಕ ಸೈನಿಕರು ರೈತಾಪಿ ಕುಟುಂಬದಿಂದ ಬಂದವರು ಸೈನ್ಯದ ಉದ್ಯೋಗವೆಂಬುದು ಲಕ್ಷಾಂತರ ಕುಟುಂಬಗಳ ಹೆಮ್ಮೆ ಹಾಗೂ ಆರ್ಥಿಕ ಆಧಾರವಾಗಿದೆ ಈ ಅಗ್ನಿಪತ್ ಯೋಜನೆಯ ಜಾರಿಯಿಂದ ನರೇಂದ್ರ ಮೋದಿಯವರು ಸೈನಿಕರಿಗೆ ಅತ್ತ ಶ್ರೇಣಿಯು ಇಲ್ಲ ಇತ್ತ ಪಿಂಚಣಿ ಇಲ್ಲ ಎಂಬ ಯೋಜನೆಯನ್ನು ಜಾರಿಗೊಳಿಸ ಹೊರಟಿರುವುದು ದೇಶ ತಲೆತಗ್ಗಿಸುವ ವಿಷಯವಾಗಿದೆ ಎಂದರು ಸೈನ್ಯದ ನಿಯಮಿತ ನೇಮಕಾತಿಯಲ್ಲಿ ಆಗಿರುವ ಬೃಹತ್ಪ್ರಮಾಣದ ಕಡಿತವು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ವರ್ಷಗಳ ಕನಸು ಕಾಣುತ್ತಿದ್ದಾರೆ ಇತರ ಮಕ್ಕಳಿಗೆ ದ್ರೋಹವಾಗಿದೆ ಎಂದವರು ಅಖಿಲ ಭಾರತ ಎಲ್ಲಾ ಶ್ರೇಣಿಯ ನೇಮಕಾತಿಯಲ್ಲಿ ರೈತ ಚಳುವಳಿಯ ತುಂಬಾ ಕ್ರಿಯಾಶೀಲವಾಗಿರುವ ಪ್ರದೇಶಗಳ ನೇಮಕಾತಿ ಪ್ರಮಾಣವನ್ನು ಬಹಳ ದೊಡ್ಡ ರೀತಿಯಲ್ಲಿ ಕಡಿತ ಮಾಡಿರುವುದು ಆಕಸ್ಮಿಕವಾಗಿ ಆಗಿರುವುದಲ್ಲ ರೈತ ಚಳುವಳಿಯ ಕಾರಣದಿಂದ ಕಂಗಾಲಾಗಿದ್ದರು ರೈತರ ಮೇಲೆ ಸೇಡು ತೀರಿಸಿಕೊಳ್ಳಲು ಕಾಡುತ್ತಿರುವ ಮತ್ತೊಂದು ದೇಶದ ಆಟವಿದೆಂದು ಪುಟ್ಟಮಾದು ಕಟುವಾಗಿ ಟೀಕಿಸಿದರು ಇಂದಿನಿಂದ ಆರಂಭವಾಗುತ್ತಿರುವ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸುವ ಸೈನಿಕರನ್ನು ಗುತ್ತಿಗೆ ಕಾರ್ಮಿಕರಂತೆ ಪರಿಗಣಿಸದೆ ಪೂರ್ಣ ಪ್ರಮಾಣದ ಉತ್ತಮ ವೇತನ ಜೀವನ ಭದ್ರತೆ ಹಾಗೂ ಪಿಂಚಣಿಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆಂಪು ಗೌಡ ಟಿ ಯಶವಂತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ ಕುಮಾರಿ ಸಿದ್ದರಾಜು ಮುಂತಾದವರಿದ್ದರು.

Share This Article
Leave a comment