December 22, 2024

Newsnap Kannada

The World at your finger tips!

madivas 1

ಯಾರದ್ದೋ ದುಡ್ಡು ಯಾವುದೋ ಜಾತ್ರೆಯಲ್ಲಿ ನಟಿಮಣಿಗಳ ಮಜಾ !

Spread the love

ಇತ್ತೀಚಿನ ದಿನಗಳಲ್ಲಿ ನಟಿಮಣಿಗಳ ಸಾಮಾಜಿಕ ಜಾಲತಾಣದಲ್ಲಿ ಪೇಜ್ ಗಮನಿಸಿದ್ದೀರಾ? ಒಂದು ಸಾರಿ ನೋಡಿ. ಮಾಲ್ಡೀವ್ಸ್ ನ ಸಮುದ್ರದ ತೀರಗಳಲ್ಲಿ ತುಂಡುಡುಗೆ ತೊಟ್ಟು ಪದೇ ಪದೇ ಫೋಟೋ ಅಪ್ ಲೋಡ್ ಮಾಡುವ ನಟಿಗಳ ಮರ್ಮ ತುಂಬಾ ರೋಚಕವಾಗಿದೆ.

ಡಜನ್ ಗಟ್ಟಲೇ ನಟಿಯರು ಮಾಲ್ಡೀವ್ಸ್ ನಲ್ಲಿಯೇ ಜಾಲಿ ಮಾಡಲು ಸ್ವಂತ ಹಣ ಕೊಟ್ಟು ಹೋಗಿದ್ದಾರೆಂದು ಭಾವಿಸಿದ್ದೀರಾ? ದೇವರಾಣೆಗೂ ಇಲ್ಲ. ಯಾರದ್ದೋ ದುಡ್ಡು ಯಾವುದೋ ಜಾತ್ರೆ ಮಾಡುತ್ತಿದ್ದಾರೆ ಆ ನಟಿಮಣಿಗಳು.‌

pranith

ಉಚಿತ ಪ್ರವಾಸ ಏಕೆ ಗೊತ್ತಾ?

8 – 10 ನಟಿಯರು ಒಟ್ಟಿಗೆ ಮಾಲ್ಡೀವ್ಸ್ ಗೆ ಹೋಗಲು ಏನು ಕಾರಣ ಎಂದರೆ ಕಂಡವರನ್ನು ಉದ್ಧಾರ ಮಾಡಲು.
ಈ ನಟಿ ಮಣಿಯರು ಯಾರೂ ಸಹ ಸ್ವಂತ ಖರ್ಚಿನಲ್ಲಿ ಹಣ ಕೊಟ್ಟು ಮಾಲ್ಡೀವ್ಸ್ ಗೆ ತೆರಳಿಲ್ಲ. ಇದೆಲ್ಲವೂ ಉಚಿತ! ಆದರೆ ಸಮುದ್ರ ತೀರದಲ್ಲಿ ಬೇರೆಯವರ ಕಣ್ಣುಕೊರೆಸುವ ರೀತಿಯಲ್ಲಿ ಡ್ರೆಸ್ ಹಾಕಿಕೊಂಡು ದಿನಕ್ಕೆ ಮೂರು ಬಾರಿ ವಿವಿಧ ಭಂಗಿಗಳ ಆ ಫೋಟೋ ಗಳನ್ನು ನಟಿಮಣಿಯರ ತಮ್ಮ ಸಾಮಾಜಿಕ ಜಾಲತಾಣದ ಪೇಜ್ ಗಳಲ್ಲಿ ಅಪ್ ಲೋಡ್ ಮಾಡಬೇಕು! ಇದು ಉಚಿತ ಪ್ರವಾಸದ ಕಂಡೀಷನ್. ನಟಿಯರಿಗೆ ಮಾತ್ರ ಈ ಅವಕಾಶವಂತೆ.

ಮಾಲ್ಡಿವ್ಸ್ ಎಂದರೆ ಪ್ರವಾಸೋದ್ಯಮ ಗಣಿ. ಮಾಲ್ಡೀವ್ಸ್ ನ ಮೂಲ ಆದಾಯವೇ ಪ್ರವಾಸೋದ್ಯಮ.. ಆದರೆ ಕೊರೊನಾ ಬಂದ ನಂತರ ಅಲ್ಲಿನ ಪ್ರವಾಸೋದ್ಯಮ ನೆಲಕಚ್ವಿದೆ. ಅದನ್ನು ಮತ್ತೆ ತರಲು ಹರಸಾಹಸ ಪಡುತ್ತಿದ್ದಾರೆ.

ಜಾಹಿರಾತು ಕೊಟ್ಟರೆ ಅಷ್ಟೇನು ಪ್ರಯೋಜನವಿಲ್ಲ. ಕೊನೆಗೆ ಗುಡ್ ಐಡಿಯಾ ಬಂತು ಅಲ್ಲಿನ ರೆಸಾರ್ಟ್ ಮಾಲಿಕರಿಗೆ.

ಈ ಹೊಸ ಪ್ಲಾನ್ ಪ್ರಕಾರ ನಮ್ಮ ನಟಿಮಣಿಯರು ಮಾಲ್ಡಿವ್ಸ್ ನಲ್ಲಿ ಮಜಾ ಮಾಡಲು ದುಡ್ಡು ಕೊಟ್ಟು ಕರೆಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದು ಪ್ಲಾನ್ ಇವರದ್ದು.

ವಿದೇಶಿ ಪ್ರವಾಸಕ್ಕೆ ಅನುಮತಿ ನೀಡಿದರೂ ಕೊರೊನಾ ಭಯದಿಂದ ಯಾರೂ ಸಹ ಪ್ರವಾಸಕ್ಕೆ ಹೋಗುತ್ತಿಲ್ಲ.
ಕನ್ನಡ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಯ ನಟಿಮಣಿಯರನ್ನು ಮಾಲ್ಡೀವ್ಸ್ ಗೆ ಆಹ್ವಾನಿಸಿರುವ
ರೆಸಾರ್ಟ್ ಮಾಲೀಕರು ತಾರೆಯರಿಗೆ ಸೂಪರ್ ಆಫರ್ ನೀಡಿದ್ದಾರೆ.‌

ನಟಿಮಣಿಯರ ಪ್ರಯಾಣ ವೆಚ್ಚ, ಊಟ-ವಸತಿ, ಶಾಪಿಂಗ್ ಸೇರಿದಂತೆ ಎಲ್ಲವನ್ನೂ ಅಲ್ಲಿನ ಆಯೋಜಕರೇ ಒದಗಿಸಿ ನಟಿಮಣಿಯರನ್ನು ಕರೆಸಿಕೊಂಡಿದ್ದಾರೆ. ತುಂಡು ಉಡುಗೆಯ ಫೋಟೋ ಅಪ್ ಲೋಡ್ ಮಾಡುವುದೂ ಸೇರಿದಂತೆ ಕೆಲವು ಷರತ್ತುಗಳನ್ನು ಸಹ ಮಾಡಿದ್ದಾರೆ.

ಯಾವ ನಟಿಯರು ಅಲ್ಲಿನ ಜಾತ್ರೆಗೆ ಹೋಗಿದ್ದರು?

ಸ್ಯಾಂಡಲ್‍ವುಡ್‍ನ ಶಾನ್ವಿ ಶ್ರೀವಾಸ್ತವ್, ಪ್ರಣಿತಾ, ಬಾಲಿವುಡ್‍ನ ರಾಕುಲ್ ಪ್ರೀತ್ ಸಿಂಗ್ ತಾಪ್ಸಿ ಪನ್ನು.. ಕತ್ರಿನಾ ಕೈಫ್.. ಸೋನಾಕ್ಷಿ ಸಿನ್ಹಾ.. ಇಲಿಯಾನಾ.. ಮೌನಿ ರಾಯ್.. ತೆಲುಗಿನ ಸಮಂತಾ.. ಕಾಜಲ್ ಅಗರ್‍ವಾಲ್ ಹೀಗೆ ಸಾಲು ಸಾಲು ನಟಿಯರು ಮಾಲ್ಡೀವ್ಸ್ ನ ಉಚಿತ ಪ್ರವಾಸದ ಫಲಾನುಭವಿಗಳು.

ನಟಿ ಮಣಿಯರಿಗೆ ಊಟ, ವಸತಿ, ಶಾಪಿಂಗ್ ಜೊತೆಗೆ ಪ್ರತ್ಯೇಕ ಫೋಟೋಗ್ರಾಫರ್ ಗಳ ವ್ಯವಸ್ಥೆ ಮಾಡಿದ್ದಾರೆ.

ಪ್ರತಿ ಚಿತ್ರಗಳಲ್ಲಿಯೂ ಹಾಟ್, ಗ್ಲಾಮರ್ ಆಗಿ ಕಾಣಿಸಿಕೊಳ್ಳಬೇಕು. ಇದರ ಜೊತೆಗೆ ಪ್ರತಿ ಫೋಟೋಗೆ ಲೊಕೇಶನ್ ಜೊತೆಗೆ ರೆಸಾರ್ಟ್ ಹೆಸರು ಹಾಕಬೇಕು. ಆದರೆ ಈ ಗುಟ್ಟು ಯಾರಿಗೂ ತಿಳಿಯಬಾರದು. ಈ ಮೂಲಕ ಮಾಲ್ಡಿವ್ಸ್ ಕೊರೊನಾ ಫ್ರೀ, ಇಲ್ಲಿ ಮಸ್ತ್ ಮಜಾ ಮಾಡಬಹುದು. ಕೊರೊನಾ ಬಂದ ನಂತರ ಮೊದಲ ವಿದೇಶ ಪ್ರವಾಸ ಮಾಲ್ಡೀವ್ಸ್ ಎಂಬುದನ್ನು ಸಾಬೀತು ಪಡಿಸಬೇಕು..ಎಂದು ನಟಿಮಣಿಯರಿಗೆ ತಿಳಿಸಿದ್ದಾರೆ.

ಈ ಎಲ್ಲ ಷರತ್ತುಗಳಿಗೆ ಒಪ್ಪಿರುವ ತಾರೆಯರು ತಂಡೋಪತಂಡವಾಗಿ ತೆರಳಿ, ಮಜಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತುಂಡುಡುಗೆ ತೊಟ್ಟು ಪಡ್ಡೆ ಹೈಕಳ ನಿದ್ದೆ ಗೆಡಿಸುತ್ತಿದ್ದಾರೆ!

Copyright © All rights reserved Newsnap | Newsever by AF themes.
error: Content is protected !!