December 23, 2024

Newsnap Kannada

The World at your finger tips!

srileela 1

ನಟಿ ಶ್ರೀಲೀಲಾ ತಾಯಿಯ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Spread the love

ಆನೇಕಲ್ ನ ಅಲಯನ್ಸ್​ ಕಾಲೇಜಿನ ಗಲಾಟೆಗೆ ಸಂಬಂಧಿಸಿದಂತೆ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದಕ್ಕೆ ಹೋಗಿದೆ. ಸಧ್ಯಕ್ಕೆ ನಾಪತ್ತೆಯಾಗಿರುವ ಸ್ವರ್ಣಲತಾ ಆನೇಕಲ್ ಜಿಲ್ಲಾ ಮತ್ತು ಸೆಷನ್ಸ್​ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಬೇಲ್​ ಸಿಗುವ ನಿರೀಕ್ಷೆಯಲ್ಲಿದ್ದ ಸ್ವರ್ಣಲತಾಗೆ ನ್ಯಾಯಾಲಯ ಶಾಕ್ ನೀಡಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಆಗಸ್ಟ್ 10 ರಂದು ಕಾಲೇಜಿಗೆ ನುಗ್ಗಿ ಸ್ವರ್ಣಲತಾ, ಮಧುಕರ್​ ಅಂಗೂರ್​ ಸೇರಿದಂತೆ 50 ಜನರ ತಂಡದಿಂದ ಗಲಾಟೆ ನಡೆಸಿತ್ತು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮುರಘಾ ಸ್ವಾಮಿಗೆ ಚಿಕಿತ್ಸೆ: ನ್ಯಾಯಾಲಯ ಅನುಮತಿ

ಎ2 ಆರೋಪಿಯಾಗಿದ್ದ ಸ್ವರ್ಣಲತಾ ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದು, ಅಜ್ಞಾತ ಸ್ಥಳದಿಂದಲೇ ತಮ್ಮ ವಕೀಲರಿಂದ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಮುನ್ನವೇ ಸ್ವರ್ಣಲತಾ ಪೊಲೀಸರ ಕೈಗೆ ಸಿಕ್ಕಿ ಜೈಲಿಗೆ ಹೋಗುವ ಆತಂಕದಲ್ಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!