December 19, 2024

Newsnap Kannada

The World at your finger tips!

sandalwood,actress,good news

Rahul Gandhi Corner Meeting, No entry to Ramya ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್, ರಮ್ಯಾಗೆನೇ ನೋ ಎಂಟ್ರಿ; ಸಿಡಿಮಿಡಿಗೊಂಡು ವಾಪಸ್​ ಹೋದ ನಟಿ

ಇನ್ ಸ್ಟಾದಲ್ಲಿ ನಿಂದಿಸಿದವನ ವಿರುದ್ದ ಪೋಲಿಸರಿಗೆ ದೂರು ನೀಡಿದ ನಟಿ ರಮ್ಯಾ

Spread the love
WhatsApp Image 2022 06 09 at 4.49.05 PM

ಸೋಷಿಯಲ್ ಮೀಡಿಯಾ ‘ಪೋಸ್ಟ್’ಗೆ ಅಶ್ಲೀಲ ಕಾಮೆಂಟ್ ಮಾಡಿದ ಆರೋಪಿಯ ಬಂಧನಕ್ಕಾಗಿ ನಟಿ ರಮ್ಯ ಹಲಸೂರು ಗೇಟ್ ಪೊಲೀಸ್ ಠಾಣೆಯ ಸಿಇಎಸ್ ಠಾಣೆಗೆ ತೆರಳಿದರು.

ಸಿಇಎಸ್ ಠಾಣೆಗೆ ತಾನು ಮಾಡಿದಂತ ಇನ್ಟಾಗ್ರಾಂ ಪೋಸ್ಟ್ ಒಂದಕ್ಕೆ ಕಾಮೆಂಟ್ ಮಾಡಿ, ನಿಂದಿಸಿದಂತ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಂತೆಯೂ ನಟಿ ರಮ್ಯಾ ದೂರು ನೀಡಿದ್ದಾರೆ.

WhatsApp Image 2022 06 09 at 4.49.23 PM

ಇದನ್ನು ಓದಿ –ಚಿತ್ರ ಸಾಹಿತಿ ಪುರುಷೋತ್ತಮ ಕಣಗಾಲ್ ಹೃದಯಾಘಾತದಿಂದ ನಿಧನ

ನಟಿ ರಮ್ಯ ಅವರು, ಜೂನ್ 6ರಂದು ಚಾರ್ಲಿ 777 ಕನ್ನಡ ಸಿನಿಮಾ ಸಂಬಂಧ ಚಾರ್ಲಿ 77 ನೋಡಿ, ಈ ಸಿನಿಮಾ ಚೆನ್ನಾಗಿದೆ ಎಂಬುದಾಗಿ ಇನ್ಟಾಗ್ರಾಂ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಈ ಪೋಸ್ಟ್ ಗೆ ಜೂನ್.8ರಂದು ಪ್ರೀತಂ ಪ್ರಿನ್ಸ್ ಕೆ ಎಂಬಾತ ರಮ್ಯ ನಿಂದಿಸಿ, ಅಶ್ಲೀಲವಾಗಿ ಕಾಮೆಂಟ್ ಮಾಡಿ, ಟ್ಯಾಗ್ ಮಾಡಿದ್ದ ಎನ್ನಲಾಗಿದೆ.

ಈ ಪೋಸ್ಟ್ ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ ಸಂಬಂಧ ನಟಿ ರಮ್ಯಾ ದೂರು ದಾಖಲಿಸಿದ್ದಾರೆ. ದೂರು ಪಡೆದಿರುವಂತ ಹಲಸೂರು ಗೇಟ್ ಪೊಲೀಸ್ ಠಾಣೆಯ ಸಿಇಎಸ್ ಠಾಣೆಯ ಪೊಲೀಸರು, ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಯ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!