February 25, 2026

Newsnap Kannada

The World at your finger tips!

lakshmi

ತೆಲುಗಿನ ನಟ ಜಯಂತಿಗೆ ಕಪಾಳ ಮೋಕ್ಷ ಮಾಡಿದ್ದ – ನಟಿ ಲಕ್ಷ್ಮೀ

Spread the love

ತೆಲುಗಿನ‌‌ ನಟನೊಬ್ಬ ಜಯಂತಿಗೆ ಕಪಾಳ ಮೋಕ್ಷ ಮಾಡಿದ ಘಟನೆಯನ್ನು ಹಿರಿಯ ನಟಿ ಲಕ್ಷ್ಮೀ ನೆನಪಿಸಿಕೊಂಡರು.

ಜಯಂತಿ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಲಕ್ಷ್ಮೀ
ಜಯಂತಿಗೆ ತಾಳ್ಮೆ ಜಾಸ್ತಿ ಇತ್ತು. ಎಂದಿಗೂ ಕೋಪ ಮಾಡಿಕೊಂಡವರಲ್ಲ.
ಒಂದು ಘಟನೆ ನನಗೆ ಇನ್ನೂ ನೆನಪಿದೆ.‌ ತೆಲುಗು ಸಿನಿಮಾದ ಶೂಟಿಂಗ್ ಒಂದನ್ನು ಮುಗಿಸಿ ಅವರು ಬೆಂಗಳೂರಿಗೆ ಬರ್ಬೇಕಿತ್ತು.

ಊಟದ ವೇಳೆ ಇಬ್ಬರೂ ಮೀಟ್ ಮಾಡಿದ್ವಿ. ಇನ್ನೊಂದು ಸಿನಿಮಾ ಶೂಟ್​ಗೆ ಹೋಗಬೇಕು.. ಹೀರೋ, ನಿರ್ಮಾಪಕಗೆ ತುಂಬಾ ಕೋಪ ಏನು ಮಾಡೋದು ಎಂದರು.

ಅದು ಕ್ಲೈಮ್ಯಾಕ್ಸ್ ಶೂಟ್ ಅಲ್ವಾ.. ಇವರಿಗೆ ಹೇಳಿ ಹೊರಡಿ ಎಂದು ಹೇಳಿದ್ದೆ. ನಾನು ಆತನ ಹೆಸರು ಹೇಳೋದಿಲ್ಲ. ಕೆಲವು ಹೊತ್ತಿನಲ್ಲೇ ಆತ ಬಂದು ಜಯಂತಿ ಅಮ್ಮನಿಗೆ ಹೊಡೆದುಬಿಟ್ಟಿದ್ದಾರೆ ಅಂತ ನನಗೆ ಹೇಳಿದರು ನನಗಿಂತಲೂ ಚಿಕ್ಕವಯಸ್ಸಿನವನು ಅಂತ ಜಯಂತಿ ಅಮ್ಮ ಸುಮ್ಮನಾಗಿಬಿಟ್ಟರು.

ಜಯಂತಿ ಜೀವನದಲ್ಲಿ ಅಷ್ಟಾಗಿ ಖುಷಿಯಾಗಿರಲಿಲ್ಲ.. ಒಳಗೆ ಅಗಾಧವಾದ ದುಃಖವನ್ನು ಇಟ್ಟುಕೊಂಡಿದ್ದರು. ಹೋಗುವಾಗಲೂ ಹೇಳದೇ ಹೊರಟುಹೋದರು ಎಂದು ನಟಿ ಲಕ್ಷ್ಮೀ ಬೇಸರದಿಂದ ಹೇಳಿದರು.

error: Content is protected !!