ವಂಚಕನೆಂದು ಹೇಳಲಾದ ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಹೆಸರಿನಲ್ಲಿರುವ 7 ಕೋಟಿ ರೂಪಾಯಿ ನಿಖರ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಅನ್ನು ಇ ಡಿ ಮುಟ್ಟುಗೋಲು ಹಾಕಿಕೊಂಡಿದೆ.
ಜಾಕ್ವೆಲಿನ್ ಫೆರ್ನಾಂಡಿಸ್ ಅವರ 7.27 ಕೋಟಿ ರೂಪಾಯಿ ಸೊತ್ತುಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ 7.12 ಕೋಟಿ ರೂಪಾಯಿ ನಿರಖ ಠೇವಣಿ ಹಾಗೂ ನಟಿಯ ಪರವಾಗಿ ಸ್ಕ್ರಿಪ್ಟ್ ಬರಹಗಾರನಿಗೆ ಚಂದ್ರಶೇಖರ್ ಪಾವತಿಸಿದ 15 ಲಕ್ಷ ರೂಪಾಯಿ ಕೂಡ ಸೇರಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ 2019ರಿಂದಲೂ ಜೈಲಿನಲ್ಲಿರುವ ರ್ಯಾನ್ಬ್ಯಾಕ್ಸಿಯ ಮಾಜಿ ಮಾಲಕ ಶಿವಿಂದರ್ ಸಿಂಗ್ ಕುಟುಬದಿಂದ ಸುಲಿಗೆ ಮಾಡಿರುವುದೆಂದು ಹೇಳಲಾದ 200 ಕೋಟಿ ರೂಪಾಯಿಯಿಂದ 5.71 ಕೋಟಿ ರೂಪಾಯಿಯನ್ನು ಚಂದ್ರಶೇಖರ್ ನಟಿಗೆ ಕೊಡುಗೆಯಾಗಿ ನೀಡಿದ್ದ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಪತಿ ಶಿವಿಂದರ್ ಸಿಂಗ್ ಅವರ ಬಿಡುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿ ಚಂದ್ರಶೇಖರ್ ತನ್ನಿಂದ ಹಣ ತೆಗೆದುಕೊಂಡಿದ್ದಾನೆ ಎಂದು ಆರೋಪಿಸಿ ಶಿವಿಂದರ್ ಸಿಂಗ್ ಅವರ ಪತ್ನಿ ಆದಿತಿ ಸಿಂಗ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ