December 19, 2024

Newsnap Kannada

The World at your finger tips!

film,entertainment,sandalwood

Actress Hemalatha, daughter of Gubbi Veeranna, is no moreಗುಬ್ಬಿ ವೀರಣ್ಣನವರ ಪುತ್ರಿ, ಹಿರಿಯ ನಟಿ ಹೇಮಲತಾ ಇನ್ನಿಲ್ಲ #thenewsnap #latestnews #Kannada_news #kannada_film_industry #Sandalwood #death #Namma_mysuru #Mandya_news #Bengaluru

ಗುಬ್ಬಿ ವೀರಣ್ಣನವರ ಪುತ್ರಿ, ಹಿರಿಯ ನಟಿ ಹೇಮಲತಾ ಇನ್ನಿಲ್ಲ

Spread the love

ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣನವರ ಪುತ್ರಿ ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ (70)ವಿಧಿವಶರಾಗಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಘಾತಕ್ಕೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಇದನ್ನು ಓದಿ –ಹೋಟೆಲ್ ಕೊಠಡಿ ಮುಂದೆ ಹೈಡ್ರಾಮಾ- ಪವಿತ್ರ ಲೋಕೇಶ್, ನರೇಶ್ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ

ಹೇಮಲತಾ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಸೋಮೇಶ್ವರ ಲೇಔಟ್ ನಲ್ಲಿ ವಾಸಿಸುತ್ತಿದ್ದರು , ಹೇಮಲತಾ ಅವರ ಅಂತಿಮ ಇಚ್ಛೆಯಂತೆ ಕುಟುಂಬಸ್ಥರು ಅವರ ದೇಹವನ್ನು ಖಾಸಗಿ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಭರತನಾಟ್ಯ ಕಲಾವಿದೆಯೂ ಆಗಿದ್ದ ಹೇಮಲತಾ ಅವರು ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಕಲ್ಯಾಣ್ ಕುಮಾರ್ ಅವರ ‘ಕಲಾವತಿ’ ಚಿತ್ರದಲ್ಲಿ ಹೇಮಲತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

1966 ರಲ್ಲಿ ಬಿಡುಗಡೆಯಾದ ವರನಟ ಡಾ. ರಾಜಕುಮಾರ್ ಅವರ ‘ಎಮ್ಮೆ ತಮ್ಮಣ್ಣ’ ಚಿತ್ರದಲ್ಲೂ ಹೇಮಲತಾ ಅಭಿನಯಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!