December 22, 2024

Newsnap Kannada

The World at your finger tips!

suicide,death,actress

actress come model comitted suicide during video call

ಖಿನ್ನತೆಗೆ ಒಳಗಾದ ನಟಿಯೊಬ್ಬಳು ಲೈವ್ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆಗೆ ಶರಣು

Spread the love

ಮತ್ತೊಬ್ಬ ಮಲಯಾಳಂ ನಟಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

ಇದನ್ನು ಓದಿ :SSLC ಪರೀಕ್ಷೆ ಫಲಿತಾಂಶ – ನಾಳೆ ಮಧ್ಯಾಹ್ನ 12.30ಕ್ಕೆ ಪ್ರಕಟ – ಸಚಿವ ಬಿ.ಸಿ ನಾಗೇಶ್ ಘೋಷಣೆ

ನಟಿ ಕಂ ಮಾಡೆಲ್ ಆಗಿದ್ದ ಶೆರಿನ್ ಕೆಲಿನ ಮ್ಯಾಥೋ (26)ಅವರು ಕೇರಳದ ಚಕ್ಕರಪಂರಬು ಬಳಿಯ ಅಪಾರ್ಟ್ಮೆಂಟ್ ನಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ.

ಈ ನಟಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಯಾರದ್ದೋ ಜೊತೆ ವಿಡಿಯೋ ಕಾಲ್ ಮಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಶೆರಿನ್ ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ಅವರ ರೂಮ್ ಮೇಟ್ಸ್ ಖಚಿತ ಪಡಿಸಿದ್ದಾರೆ

ವಿಡಿಯೋ ಕಾಲ್ ನಲ್ಲಿ ಇರುವಾಗಲೇ ಶೆರಿನ್ ನೇಣು ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ದಿನಗಳಿಂದ ಶೆರಿನ್ ಡಿಪ್ರೆಶನ್ ನಿಂದ ಬಳಲುತ್ತಿದ್ದರು. ಹಾಗಾಗಿ ಇವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ರೂಮ್ ಮೆಟ್ಸ್

ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಹುಟ್ಟು ಹಬ್ಬದ ದಿನದಂದೇ ನಟಿ ಸಹನಾ ತಮ್ಮ ಅಪಾರ್ಟಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪತಿ ಸಾಜದ್ ಅವರ ಹಿಂಸೆಯಿಂದಲೇ ಮಗಳ ಸಾವಾಗಿದೆ ಎಂದು ಸಹನಾ ಕುಟುಂಬಸ್ಥರು ಆರೋಪಿಸಿದ್ದರು. ಸಹನಾ ಸಾವನ್ನು ಮಲಯಾಳಂ ಸಿನಿಮಾ ರಂಗ ಇನ್ನೂ ಅರಗಿಸಿಕೊಂಡಿಲ್ಲ, ಅಷ್ಟರಲ್ಲಿ ಮತ್ತೋರ್ವ
ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!