ನಟ ಸುದೀಪ್ ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ: ಕೇಸು ದಾಖಲು

Team Newsnap
1 Min Read
Actor Sudeep threatened to leak private video: case filed ನಟ ಸುದೀಪ್ ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ: ಕೇಸು ದಾಖಲು

ನಟ ಸುದೀಪ್‌ ಇಂದು ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ದಂತೆ ಸುದೀಪ್‌ ಅವರ ಖಾಸಗಿ ವಿಡಿಯೋಗಳನ್ನು ಲೀಕ್‌ ಮಾಡುವುದಾಗಿ ಬೆದರಿಕೆ ಪತ್ರವೊಂದು ಬಂದಿದೆ ಎನ್ನಲಾಗಿದೆ.

ಈ ಕುರಿತಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಸುದೀಪ್ ಮ್ಯಾನೇಜರ್ ಜಾಕ್ ಮಂಜು ಅವರು ದೂರು ನೀಡಿದ್ದಾರೆ.
ಸುದೀಪ್ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬಂದಿರುವ ಬೆದರಿಕೆ ಪತ್ರದಲ್ಲಿ ಅವಾಚ್ಯ ಶಬ್ದಗಳನ್ನು ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.

ಘಟನೆ ಸಂಬಂಧ ಜಾಕ್ ಮಂಜು ದೂರಿನನ್ವಯ ಐಪಿಸಿ 504 (ಬೆದರಿಕೆ), 506 (ಪ್ರಾಣ ಬೆದರಿಕೆ) ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ ತನಿಖೆ ನಡೆದಿದೆ.ಇದನ್ನು ಓದಿ –ದೇವನಹಳ್ಳಿ ಯಲ್ಲಿ ಭಾರಿ ಮಳೆ – ವಿಮಾನ ಸಂಚಾರದಲ್ಲಿ ಅಸ್ತವ್ಯಸ್ತ

Share This Article
Leave a comment