December 22, 2024

Newsnap Kannada

The World at your finger tips!

WhatsApp Image 2022 11 02 at 3.48.35 PM

ನಟ ಸೃಜನ್ ಲೋಕೇಶ್ ಟೀಂ – ಸಚಿವ ವಿ.ಸೋಮಣ್ಣ ಪುತ್ರನ ಮಧ್ಯೆ ಗಲಾಟೆ..?

Spread the love

ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಹಾಗೂ ನಟ ಸೃಜನ್ ಲೋಕೇಶ್ ಟೀಮ್ ತಂಡದ ನಡುವೆ ಗಲಾಟೆ ನಡೆದಿದೆ.

ಸೋಮವಾರ ರಾತ್ರಿ ಬೆಂಗಳೂರಿನ ಮುದ್ದಿನಪಾಳ್ಯದ ಕಿಂಗ್ಸ್ ಕ್ಲಬ್​ನಲ್ಲಿ ಘಟನೆ ನಡೆದಿದೆ, ಬ್ಯಾಡ್ಮಿಂಟನ್​ ಟೂರ್ನಮೆಂಟ್​​ಗಾಗಿ ಪ್ರಾಕ್ಟಿಸ್​​ ನಡೆಸುತ್ತಿದ್ದ ವೇಳೆ ಸೃಜನ್​ ಲೋಕೇಶ್​​ ಟೀಮ್​, ಪ್ರಾಕ್ಟಿಸ್​​ ಮುಗಿದ ನಂತರ ರಾತ್ರಿ ಪಾರ್ಟಿ ಮಾಡಿ, ಏರು ಧ್ವನಿಯಲ್ಲಿ ಕಿರುಚಾಡುತ್ತಿದ್ದರಂತೆ.

ಈ ವೇಳೆ ಅರುಣ್​ ಸೋಮಣ್ಣ ಟೀಮ್​ ಕ್ಲಬ್​ಗೆ ಬಂದಿದ್ದು, ಯಾಕೆ ಜೋರಾಗಿ ಗಲಾಟೆ ಮಾಡ್ತೀರಾ ಅಂತ ಪ್ರಶ್ನೆ ಮಾಡಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಹೊಡೆದಾಟ ಕೂಡ ನಡೆದಿದೆ ಎನ್ನಲಾಗಿದೆ.

ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ, ಯಾರೂ ದೂರು ನೀಡಿಲ್ಲ ಎಂಬ ಮಾಹಿತಿ ಸಿಕ್ಕಿದೆ.

Copyright © All rights reserved Newsnap | Newsever by AF themes.
error: Content is protected !!