December 23, 2024

Newsnap Kannada

The World at your finger tips!

shivram actor

ಹಿರಿಯ ನಟ ಶಿವರಾಂ ತಲೆಗೆ ಬಲವಾದ ಪೆಟ್ಟು: ಐಸಿಯುಗೆ ದಾಖಲು

Spread the love

ಮೆದುಳಿನಲ್ಲಿ ರಕ್ತಸ್ತ್ರಾವ ಉಂಟಾದ ಹಿನ್ನೆಲೆಯಲ್ಲಿ ಹಿರಿಯ ನಟ ಶಿವರಾಂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಿರಿಯ ನಟ ಶಿವರಾಮ್​ (84)ಅವರನ್ನು ವಿದ್ಯಾಪೀಠ ಸರ್ಕಲ್ ಬಳಿಯ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ

ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಇನ್ನು ಆಸ್ಪತ್ರೆ ಮೂಲಗಳ ಪ್ರಕಾರ ಅವರ ಮೆದುಳಿಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ.

ಬೆಂಗಳೂರಿನ ಹೊಸಕರೆ ಹಳ್ಳಿಗೆ ಕಾರಿನಲ್ಲಿ ಅವರು ಹೋಗಿದ್ದ ವೇಳೆ, ಈ ಘಟನೆ ಸಂಭವಿಸಿದೆ

ಶಿವರಾಂ ಕಾರಿನಿಂದ ಬಿದ್ದ ಹಿನ್ನೆಲೆಯಲ್ಲಿ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ. ಆದರೆ ಅವರು ಕಾರಿನಿಂದ ಬೀಳಲು ಕಾರಣವೇನು? ಅವರ ಕಾರು ಅಪಘಾತಕ್ಕೆ ಈಡಾಯಿತಾ? ಅನ್ನೋ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

Copyright © All rights reserved Newsnap | Newsever by AF themes.
error: Content is protected !!