January 29, 2026

Newsnap Kannada

The World at your finger tips!

06e3546c eb05 4743 86be c84dc40ede3a

ಹಿರಿಯ ನಟ ಶನಿ ಮಹದೇವಪ್ಪ ವಿಧಿವಶ

Spread the love

ಕನ್ನಡ ಚಿತ್ರರಂಗದ ಹಿರಿಯ ನಟ ಶನಿ ಮಹದೇವಪ್ಪ ವಿಧಿವಶರಾಗಿದ್ದಾರೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ. ಮಹದೇವಪ್ಪ ನಗರದ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಇಂದು ಸಂಜೆ 4 ಗಂಟೆಗೆ ವಿಧಿ ವಶರಾಗಿದ್ದು, ನಾಳೆ ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.

90 ವರ್ಷದ ಈ ಹಿರಿಯ ನಟ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ . ಬಹುಪಾಲು ಚಿತ್ರಗಳು ನಟ ಡಾ ರಾಜ್​ಕುಮಾರ್ ಅವರೊಂದಿಗೆ ಅನ್ನೋದು ವಿಶೇಷ.

ಶನಿ ಮಹಾದೇವಪ್ಪ ಅವರ ಪ್ರಮುಖ ಚಿತ್ರಗಳಲ್ಲಿ ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಸೇರಿ ಇನ್ನಿತರರು ಸೇರಿವೆ.

error: Content is protected !!