January 28, 2026

Newsnap Kannada

The World at your finger tips!

sanjana

ನಟಿ ಸಂಜನಾ ಅರೆಸ್ಟ್ ಮೂರು ಮೊಬೈಲ್ ವಶಕ್ಕೆ

Spread the love

ನ್ಯೂಸ್ ಸ್ನ್ಯಾಪ್
ಬೆಂಗಳೂರು

ಸ್ಯಾಂಡಲ್‌ ವುಡ್‌ ತಾರೆ ಸಂಜನಾ ಗಲ್ರಾನಿ ನಿವಾಸದ ಮೇಲೆ ಮಂಗಳವಾರ ಬೆಳಿಗ್ಗೆ ಸಿಸಿಬಿ ಪೋಲಿಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಮೂರು ವಾಹನಗಳಲ್ಲಿ ಬಂದ ಆರಕ್ಕೂ ಹೆಚ್ಚು ಅಧಿಕಾರಿಗಳ ತಂಡ ಇಂದಿರಾ ನಗರದಲ್ಲಿರುವ ಸಂಜನಾ ಫ್ಲಾಟ್‌ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.

ಈ ಮೊದಲು ನಟಿ ರಾಗಿಣಿ ನಿವಾಸದ ಮೇಲೂ ಇದೇ ರೀತಿ ದಾಳಿ ನಡೆಸಿದ್ದ ಅಧಿಕಾರಿಗಳು ಬಳಿಕ ಅವರನ್ನು ವಿಚಾರಣೆಗೆ ಕರೆಸಿಕೊಂಡು ಬಂಧನಕ್ಕೊಳಪಡಿಸಿದ್ದರು.

ಈಗ ಸಂಜನಾ ಆಪ್ತ ರಾಹುಲ್‌ ನೀಡಿದ ಮಾಹಿತಿ ಆಧಾರದ ಮೇಲೆಯೇ ಸಂಜನಾ ನಿವಾಸದ ಮೇಲೆ ದಾಳಿ ನಡೆಸಲಾಗಿದೆ .ಮೂರು ಮೊಬೈಲ್ ಗಳೂ ಸೇರಿದಂತೆ ಅನೇಕ ಮಹತ್ವ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಯಿಗೆ ಹುಷಾರಿಲ್ಲ ಎಂದು ನಟಿ ಸಬೂಬು ಹೇಳಿದರೂ ಪೋಲಿಸರು ಮಾತ್ರ ಯಾವದಕ್ಕೂ ಸೊಪ್ಪು ಹಾಕದೇ ಸಿಸಿಬಿ ಕಚೇರಿಗೆ ಬಂಧಿಸಿ ಕರೆದುಕೊಂಡು ಹೋದರು.

error: Content is protected !!