December 19, 2024

Newsnap Kannada

The World at your finger tips!

ramesh aravind

ನಟ ರಮೇಶ್ ಅರವಿಂದ್ ಸೇರಿ ಮೂವರು ಗಣ್ಯರಿಗೆ ರಾಣಿ ಚನ್ನಮ್ಮ ವಿ ವಿಯಿಂದ ಗೌರವ ಡಾಕ್ಟರೇಟ್

Spread the love

ಕನ್ನಡದ ನಟ ರಮೇಶ್ ಅರವಿಂದ್ ಸೇರಿ ಮೂವರಿಗೆ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಘೋಷಿಸಿದೆ. ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಮೇಶ್ ಅವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.

ರಮೇಶ್ ಅರವಿಂದ್ ಅವರ ಜೊತೆ ಸಮಾಜ ಸೇವೆ ಕ್ಷೇತ್ರದಲ್ಲಿ ವಿ.ರವಿಚಂದರ್, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈದ ಮಾತೆ ಅಕ್ಕ ಅನ್ನಪೂರ್ಣ ‌ತಾಯಿಗೆ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ.

ಸೆ.14 ರಂದು ಮಧ್ಯಾಹ್ನ 12 ಕ್ಕೆ ಸುವರ್ಣಸೌಧದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ವಿ.ವಿ ತಿಳಿಸಿದೆ. ಇದನ್ನು ಓದಿ :ನಂದಿನಿ ಹಾಲಿನ ದರ 3 ರು ಏರಿಕೆ : ತುಪ್ಪ ಬೆಲೆ 100 ಏರಿಕೆ ಗ್ರಾಹಕರಿಗೆ ಭಾರಿ ಶಾಕ್

ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರಚಂದ ಗೆಹ್ಲೋಟ್ ವಹಿಸಲಿದ್ದು, ಆಂಧ್ರದ ಕೇಂದ್ರಿಯ ಬುಡಕಟ್ಟು ವಿವಿ ಕುಲಪತಿ ಪ್ರೊ. ಟಿ.ವಿ ಕಟ್ಟಿಮನಿ ಅವರಿಂದ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ‌ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!