December 27, 2024

Newsnap Kannada

The World at your finger tips!

robbery , theft , film star

Actor Rajinikanth's daughter's house was robbed by car driver, housekeeper - gold jewelery found ನಟ ರಜನಿಕಾಂತ್ ಮಗಳ ಮನೆಯಲ್ಲಿ ಕಳ್ಳತನ ಮಾಡಿದ್ದು ಕಾರ್ ಚಾಲಕ, ಮನೆ ಕೆಲಸದಾಕೆ - ಚಿನ್ನಾಭರಣ ಪತ್ತೆ

ನಟ ರಜನಿಕಾಂತ್ ಮಗಳ ಮನೆಯಲ್ಲಿ ಕಳ್ಳತನ ಮಾಡಿದ್ದು ಕಾರ್ ಚಾಲಕ, ಮನೆ ಕೆಲಸದಾಕೆ – ಚಿನ್ನಾಭರಣ ಪತ್ತೆ

Spread the love

ನಟ ರಜಿನಿಕಾಂತ್ ಮಗಳು ಐಶ್ವರ್ಯಾ ನಿವಾಸದ ಲಾಕರ್​​ನಲ್ಲಿ ಕಾಣೆಯಾಗಿದ್ದ ಚಿನ್ನ ಮತ್ತು ಡೈಮಂಡ್​ಗಳನ್ನು ಮನೆಯ ಕೆಲಸದವಳೇ ಕದ್ದಿರುವುದನ್ನು ತೇನಾಂಪೇಟೆ ಪೊಲೀಸ್​​ ಪತ್ತೆ ಹಚ್ಚಿದದಾರೆ.

ಕಾರು ಚಾಲಕ ಮತ್ತು ಮನೆ ಕೆಲಸ ಮಾಡುತ್ತಿದ್ದಾಕೆ ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕಾರಿನ ಡ್ರೈವರ್​ ವೆಂಕಟೇಶ್​ ಮತ್ತು ಈಶ್ವರಿ ಅವರು ಐಶ್ವರ್ಯಾ ಅವರ 100 ಪವನ್​ ಚಿನ್ನಾಭರಣವನ್ನು ಮತ್ತು 30 ಗ್ರಾಂ ವಜ್ರಾಭರಣವನ್ನು ಇದರೊಂದಿಗೆ ನಾಲ್ಕು ಕಿಲೋಗ್ರಾಂ ಬೆಳ್ಳಿ ವಸ್ತುವನ್ನು ಕದ್ದಿದ್ದಾರೆ.

ಕದ್ದ ಆಭರಣದಿಂದ ಈಶ್ವರಿ ಮನೆ ಖರೀದಿ ಮಾಡಿದ್ದಾರೆ ಇತರ ವಸ್ತುಗಳನ್ನು ಅವರು ಖರೀದಿಸಿದ್ದಾರೆ ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ.

ಮನೆಕೆಲಸದಾಕೆ ಈಶ್ವರಿ ಅವರು ಐಶ್ವರ್ಯಾ ಅವರ ಮನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಐಶ್ವರ್ಯಾ ಲಾಕರ್​ ಕೀ ಇರುವ ಸ್ಥಳದ ಬಗ್ಗೆ ಈಶ್ವರಿಗೆ ತಿಳಿದಿತ್ತು. ಹಾಗಾಗಿ ಲಾಕರ್ ತೆರೆಯುತ್ತಿದ್ದಳು. ಹಲವು ಬಾರಿ ಲಾಕರ್​ ತೆರೆದು ಆಭರಣ ದೋಚಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಪೊಲೀಸರು ಈಶ್ವರಿಯ ಆಸ್ತಿ, ಮನೆ ಆಸ್ತಿಯ ಬಗ್ಗೆ ದಾಖಲೆಯನ್ನು ವಶ ಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.ಇದನ್ನು ಓದಿ –‘ವಿದ್ಯಾನಿಧಿ ಯೋಜನೆ’: ಆಟೋ, ಕ್ಯಾಬ್ ಚಾಲಕರ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ

Copyright © All rights reserved Newsnap | Newsever by AF themes.
error: Content is protected !!