ನಟ ನಾಗಭೂಷಣ ಕಾರು ಬೆಂಗಳೂರಿನಲ್ಲಿ ಅಪಘಾತ- ಮಹಿಳೆ ಸಾವು

Team Newsnap
1 Min Read

ಕಾರು ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣರಾದ ನಟ ನಾಗಭೂಷಣ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ .

ಕೋರಮಂಗಲದಲ್ಲಿರುವ ಜಡ್ಜ್ ಮುಂದೆ ಹಾಜರುಪಡಿಸುವುದಾಗಿ ತಿಳಿದು ಬಂದಿದೆ. ನಾಗಭೂಷಣ್ ಅವರು  ಕೂಡ ಸ್ವತಃ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಟ ನಾಗಭೂಷಣ ಕಾರು ಅಪಘಾತವಾಗಿದ್ದು, ಪಾದಚಾರಿ ಎಸ್.ಪ್ರೇಮಾ (48) ಅವರು ಮೃತಪಟ್ಟಿದ್ದಾರೆ.

ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆ ನಿವಾಸಿ ಪ್ರೇಮಾ, ಪತಿ ಬಿ. ಕೃಷ್ಣ (58) ಜೊತೆ ನಡೆದುಕೊಂಡು ಹೊರಟಿದ್ದರು.

ಇದೇ ವೇಳೆ ನಾಗಭೂಷಣ ಕಾರು ಅತೀ ವೇಗದಲ್ಲಿ ಬಂದು ದಂಪತಿಗೆ ಗುದ್ದಿದೆ. ನಂತರ, ಅದೇ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ತೀವ್ರ ಗಾಯಗೊಂಡು ಪ್ರೇಮಾ ಮೃತಪಟ್ಟಿದ್ದಾರೆ. ಕೃಷ್ಣ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಮೃತರ ಪುತ್ರನು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Share This Article
Leave a comment