March 19, 2025

Newsnap Kannada

The World at your finger tips!

Sandalwood,actor,death

Actor chethana death-hospital is locked and notice to the doctors ನಟಿ ಚೇತನಾ ಸಾವು : ಆಸ್ಪತ್ರೆಗೆ ಬೀಗ, ವೈದ್ಯರಿಗೆ ನೋಟಿಸ್

ನಟಿ ಚೇತನಾ ಸಾವು : ಆಸ್ಪತ್ರೆಗೆ ಬೀಗ, ವೈದ್ಯರಿಗೆ ನೋಟಿಸ್

Spread the love

ಕಿರುತೆರೆ ನಟಿ ಚೇತನಾ ರಾಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಟ್ ಸರ್ಜರಿ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಗೆ ಬೀಗ ಜಡಿಯಲಾಗಿದೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.

ಇದನ್ನು ಓದಿ :ಮತ್ತೆ ಗ್ಯಾಸ್ ಬೆಲೆ ಏರಿಕೆ ಶಾಕ್ – 1000 ರು ಗಡಿ ಗೃಹ ಬಳಕೆಯ LPG ಸಿಲಿಂಡರ್

ಸಾವಿನ ಘಟನೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಆರೋಗ್ಯ ಇಲಾಖೆಯು ಡಾ.ಶೆಟ್ಟಿಗೆ ನೋಟಿಸ್ ಕೊಟ್ಟು ಆಸ್ಪತ್ರೆಯನ್ನು ಬಂದ್ ಮಾಡಿಸಲಾಗಿದೆ.

ದೂರಿನ ಅನ್ವಯ ಸಾವಿನ ರಾಹಸ್ಯ ಭೇದಿಸಲು ಮುಂದಾಗಿದ್ದ ಸುಬ್ರಹ್ಮಣ್ಯ ನಗರ ಪೊಲೀಸರು, ಆಸ್ಪತ್ರೆಯ ಸಾಹೇಬ್ ಗೌಡ ಶೆಟ್ಟಿ ಸೇರಿದಂತೆ ನಾಲ್ವರ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. 

ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ವೈದ್ಯರಿಗೆ ನೋಟಿಸ್ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!