February 22, 2026

Newsnap Kannada

The World at your finger tips!

hindi divas

ಹಿಂದಿ ದಿವಸ್ ವಿರೋಧಿಸಿ ಮಂಡ್ಯ ದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ

Spread the love

ಜಿಲ್ಲಾ ಕರವೇ ಅಧ್ಯಕ್ಷ ಎಚ್ ಡಿ ಜಯರಾಂ ನೇತೃತ್ವದಲ್ಲಿ, ರೈತರು,
ಕಾರ್ಯಕರ್ತರು ‌ಮಂಗಳವಾರ ಹಿಂದಿ ದಿವಸ್ ಆಚರಣೆಯನ್ನು ಖಂಡಿಸಿ ಜಿಲ್ಲಾ ಪ್ರಧಾನ‌ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರ ದೇಶದೆಲ್ಲೆಡೆ ಹಿಂದಿ ಹೇರಿಕೆ ಮಾಡುವ ಉದ್ದೇಶದಿಂದ ಹಿಂದಿ ದಿವಸ್ ಆಚರಣೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಹಿಂದಿ ದಿವಸ್ ಆಚರಣೆ ಮಾಡಬಾರದು. ದೇಶದ ಎಲ್ಲ ಭಾಷೆಗಳಿಗೆ ಮಹತ್ವ ನೀಡಬೇಕಲ್ಲದೆ, ಕನ್ನಡ ಭಾಷೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕಲ್ಪಿಸಬೇಕೆಂದು ಪ್ರತಿಭಟನೆ ಕಾರರು ಆಗ್ರಹಿಸಿದರು.

ಪ್ರತಿಭಟನೆಯ ಒತ್ತಾಯಗಳು:

  • ಕೇಂದ್ರ ಸರ್ಕಾರ ರೈತರನ್ನು ಉದ್ಯಮಿಗಳಿಗೆ ಒತ್ತೆ ಇಡಲು ಜಾರಿಗೊಳಿಸಿರುವ ಕಾಯ್ದೆಗಳನ್ನು ಕೂಡಲೇ ರದ್ಧುಪಡಿಸಬೇಕು.
  • ಈ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ರೈತರ ಆಗ್ರಹಕ್ಕೆ ಕಿವಿಗೊಡದ ಕೇಂದ್ರ ಸರ್ಕಾರ ಹಿಂದಿ ಹೇರಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ.
  • ತಕ್ಷಣ ರೈತರ ಹಿತಕಾಯಲು ಮುಂದಾಗಬೇಕಲ್ಲದೆ, 9.5 ಇಳುವರಿ ಬರುವ ಟನ್ ಕಬ್ಬಿಗೆ 4000 ರೂ. ನಿಗದಿ ಮಾಡಬೇಕು.
  • ಸುಪ್ರೀಂ ಕೋರ್ಟ್ ತೀರ್ಪಿನಂತೆ 14 ದಿನದೊಳಗೆ ರೈತರಿಗೆ ಕಬ್ಬಿನ ಹಣ ಪಾವತಿಸಲು ಕ್ರಮಕೈಗೊಳ್ಳಬೇಕು.
  • ರೈತರ ಕಬ್ಬು ಇಳುವರಿ ಹಾಗೂ ತೂಕದ ಯಂತ್ರಗಳ ಮೇಲೆ ಹದ್ದಿನ ಕಣ್ಣಿಡಲು ರೈತರು ಹಾಗೂ ಜನಪರ ಸಂಘಟನೆಗಳು ಹಾಗೂ ಅಧಿಕಾರಿಗಳನ್ನು ಒಗ್ಗೂಡಿ ಸಮಿತಿಯನ್ನು ರಚಿಸಬೇಕು.
  • ಹಿಂದಿ ಹೇರಿಕೆಯಿಂದ ಹಿಂದೆ ಸರಿದು, ನಮ್ಮ ಇತರೆ ಬೇಡಿಕೆಗಳನ್ನು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು
error: Content is protected !!