March 14, 2026

Newsnap Kannada

The World at your finger tips!

b c nagesh

Recruitment of 15 thousand graduate primary teachers: Provisional selection list released - Minister Nagesh 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ : ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ - ಸಚಿವ ನಾಗೇಶ್

ರಾಜ್ಯದಲ್ಲಿ12 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಕ್ರಮ : ಸಚಿವ ನಾಗೇಶ್

Spread the love

ಅನೇಕ ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಇದಕ್ಕಾಗಿ 12 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಂಡ್ಯದಲ್ಲಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ನಾಗೇಶ್ ಶಿಕ್ಷಕರ ನೇಮಕಾತಿ ಮಾಡಲು ಸಧ್ಯದಲ್ಲೇ ನೋಟಿಫಿಕೇಷನ್ ಮಾಡಲಾಗುವುದು ಎಂದರು

ಶಾಲಾಕೊಠಡಿಗಳ ಕೊರತೆಯನ್ನೂ ಸರಿಪಡಿಸಲಿದ್ದೇವೆ. ಮುಂದಿನ ಶೈಕ್ಷಣಿಕ ವಷ೯ದ ಒಳಗಾಗಿ ಎಲ್ಲವನ್ನೂ ಅನುಷ್ಟಾನಕ್ಕೆ ತರಲಿದ್ದೇವೆ ಎಂದು ಹೇಳಿದರು.

ಶಾಲಾ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರುವುದಿಲ್ಲ. ಮಕ್ಕಳು ಅಪೌಷ್ಟಿಕತೆಯಿಂದ ಒದ್ದಾಡುತ್ತಿದ್ದಾರೆ. ತಜ್ಞರ ಸಲಹೆಯ ಮೇರೆಗೆ ನಾವು ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ನೀಡಲು ನಿರ್ಧರಿಸಿದ್ದೇವೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣನ್ನು ನೀಡುತ್ತೇವೆ. ಹೀಗೆ ಪ್ರೋಟಿನ್‍ಯುಕ್ತ ಆಹಾರಗಳನ್ನು ಆಯ್ಕೆ ಮಾಡಿದ್ದು, ತಜ್ಞರ ಒಪ್ಪಿಗೆಯ ಬಳಿಕ ಮುಂದಿನ ದಿನಗಳಲ್ಲಿ ಜಾರಿಗೆ ತರಲಿದ್ದೇವೆ ಎಂದರು.

ಕೊರೋನಾ ಹೆಚ್ಚಾಗಿಲ್ಲ. ಕೊರೋನಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಸಿಟಿವ್ ಬಂದಿರುವ ಮಕ್ಕಳು ಆರೋಗ್ಯವಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಶಾಲಾ-ಕಾಲೇಜುಗಳನ್ನು ಮುಚ್ಚುವುದಿಲ್ಲ ಎಂದು ತಿಳಿಸಿದರು.

error: Content is protected !!