ರಾಜ್ಯದಲ್ಲಿ 200 ಪಶುವೈದ್ಯರ ನೇಮಕಕ್ಕೆ ಕ್ರಮ : ಪಶುಸಂಗೋಪನಾ ಸಚಿವ ವೆಂಕಟೇಶ್

Team Newsnap
1 Min Read

ಪಶುಸಂಗೋಪನಾ ಇಲಾಖೆಯಲ್ಲಿ ಖಾಲಿ ಉಳಿದಿರುವ ವೈದ್ಯರ ಹಾಗೂ ವಿವಿಧ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ಕ್ರಮವಹಿಸಲಾಗುವುದು” ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದರು.

ಬೈಂದೂರಿನಲ್ಲಿ ಪಶುವೈದ್ಯರ ಕೊರತೆ ಬಗ್ಗೆ ವಿಧಾನಸಭೆಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರಸ್ತಾಪ ಮಾಡಿದ್ದು, ನಮ್ಮ ಕ್ಷೇತ್ರದ 83 ಸಾವಿರ ಜಾನುವಾರುಗಳಿಗೆ ಇಬ್ಬರು ಪಶು ವೈದ್ಯರಿದ್ದಾರೆ ಎಂದರು.

ಇದಕ್ಕೆ ಪಶುಸಂಗೋಪನಾ ಸಚಿವ ವೆಂಕಟೇಶ್ ಉತ್ತರಿಸಿದ್ದು ಡಿಸೆಂಬರ್ ಒಳಗೆ ಅಗತ್ಯ ಪಶುವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.ರಾಜ್ಯ ಸರ್ಕಾರದಿಂದ 9 ಮಂದಿ ‘IAS’ ಅಧಿಕಾರಿಗಳ ವರ್ಗಾವಣೆ

ಶೀಘ್ರದಲ್ಲೇ 200 ಪಶು ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚುವರಿ ಪಶುವೈದ್ಯರ ವರ್ಗಾವಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Share This Article
Leave a comment