ಮನೆಯ ಜಗಲಿಯ ಮೇಲೆ ಮಲಗಿದ್ದ ರಂಗಭೂಮಿ ಕಲಾವಿದೆ ಮೇಲೆ ಕಿಡಿಗೇಡಿಗಳು ಆ್ಯಸಿಡ್ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್‍ನ ಗಣೇಶ್ ಬ್ಲಾಕ್‍ನಲ್ಲಿ ಜರುಗಿದೆ.
ಆ್ಯಸಿಡ್ ದಾಳಿಯಿಂದ ಗಾಯಗೊಂಡ ದೇವಿ ರಂಗಭೂಮಿ ಕಲಾವಿದೆಯಾಗಿದ್ದರು.
ಈ ಹಿಂದೆ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಅನಾರೋಗ್ಯದಿಂದ ಬಿಎಂಟಿಸಿ ನಿರ್ವಾಹಕ ಹುದ್ದೆ ತೊರೆದಿದ್ದರು. ಮಾರ್ಚ್ 18 ರಂದು ಮನೆಯ ಜಗಲಿ ಮೇಲೆ ಮಲಗಿದ್ದ ದೇವಿ ಮೇಲೆ ರಂಗಭೂಮಿ ಸಹಪಾಠಿಗಳೇ ಈ ದುಷ್ಕ್ರತ್ಯವನ್ನು ಎಸಗಿದ್ದಾರೆ.
ಆರೋಪಿಗಳನ್ನು ರಮೇಶ್, ಸ್ವಾತಿ, ಯೋಗೇಶ್ ಎಂದು ಗುರುತಿಸಲಾಗಿದೆ ಸ್ವಾತಿ ರಮೇಶ್‍ಗೆ ಆ್ಯಸಿಡ್ ತಂದು ಕೃತ್ಯ ನಡೆಸುವಂತೆ ಪ್ರಚೋದನೆ ನೀಡಿದ್ದಾರೆ. ಇದೀಗ ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
More Stories
ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
ಧಾರವಾಡ ಬಳಿ ಭೀಕರ ರಸ್ತೆ ಅಪಘಾತ : ಮರಕ್ಕೆ ಕ್ರೂಸರ್ ಡಿಕ್ಕಿ 8 ಮಂದಿ ಸ್ಥಳದಲ್ಲೇ ಸಾವು
ಕಾರು ಸರಣಿ ಅಪಘಾತ – ಓರ್ವ ಸಾವು : ಕಿರುತೆರೆ ಸಹ ನಿರ್ದೇಶಕ ಬಂಧನ