ಬೆಂಗಳೂರಿನಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯಿಂದ ಪೊಲೀಸರು ಡೈಯಿಂಗ್ ಡಿಕ್ಲರೇಶನ್ (ಸಾವಿಗೆ ಮುನ್ನ ತಿಳಿಸುವ ಕಾರಣ) ಪಡೆದಿದ್ದಾರೆ.
ವ್ಯಕ್ತಿ ಸಾಯುವ ಮುನ್ನ ತನ್ನ ಸಾವಿಗೆ ಕಾರಣವನ್ನು ತಿಳಿಸುವುದನ್ನು ಡೈಯಿಂಗ್ ಡಿಕ್ಲರೇಶನ್ ಸ್ಟೇಟ್‍ಮೆಂಟ್ ಎಂದು ಕರೆಯಲಾಗುತ್ತದೆ.
ಇದು ಬಲವಾದ ಸಾಕ್ಷ್ಯವಾಗಿ ಆರೋಪಿಗೆ ಶಿಕ್ಷೆ ನೀಡಲು ಸಹಕಾರಿಯಾಗುತ್ತದೆ.
ಪೊಲೀಸರು ಯುವತಿಯಿಂದ ಪಡೆದ ಸ್ಟೇಟ್‍ಮೆಂಟ್‍ಗೆ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್‍ನಿಂದ ಸಹಿ ಪಡೆದುಕೊಂಡಿದ್ದಾರೆ. ಸೆಂಟ್‍ಜಾನ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಯುವತಿ ಹೋರಾಟ ಮಾಡುತ್ತಿದ್ದಾಳೆ.
ಶುಕ್ರವಾರ ಮಧ್ಯಾಹ್ನ ಆಸ್ಪತ್ರೆಗೆ ತೆರಳಿದ ಪೊಲೀಸರು ಹಾಗೂ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್(ತಹಶೀಲ್ದಾರ್) ಸಮ್ಮುಖದಲ್ಲಿ ಯುವತಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
ಆ್ಯಸಿಡ್ ದಾಳಿಕೋರ ಯಾರು? ಎಷ್ಟೊತ್ತಿಗೆ ಘಟನೆ ನಡೆಯಿತು? ದಾಳಿ ಮಾಡಿದ್ದು ಹೇಗೆ? ಆ್ಯಸಿಡ್ ಯಾವುದರಲ್ಲಿ ತಂದಿದ್ದ? ಆ್ಯಸಿಡ್ ದಾಳಿಗೊಳಗಾದ ಬಳಿಕ ಏನಾಯಿತು? ದೇಹದ ಯಾವ ಭಾಗಗಳು ಆ್ಯಸಿಡ್‍ನಿಂದ ಗಾಯಗಳಾಗಿವೆ? ಹೀಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಯುವತಿ ಉತ್ತರ ನೀಡಿದ್ದಾಳೆ ಎನ್ನಲಾಗಿದೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ