ವ್ಯಾಪಾರ ವಿಶ್ಲೇಷಣೆಯಲ್ಲಿ ಸಾಧನೆ : ಗ್ರಾಮೀಣ ಪ್ರತಿಭೆ ಶಶಿಕುಮಾರಿಗೆ ರಾಷ್ಟ್ರ ಪ್ರಶಸ್ತಿ

Team Newsnap
1 Min Read

ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ಕುಮಾರಿ ಶಶಿಕುಮಾರಿ ಬೆಂಗಳೂರಿನ ಪ್ರತಿಷ್ಠಿತ ಆರ್ ಎಸ್ ಡೇವಲಪ್ಪರ್ಸ್ ಎಂಬ ಕಂಪನಿಯಲ್ಲಿ ವ್ಯಾಪಾರ ವಿಶ್ಲೇಷಕಿಯಾಗಿ ಆರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೂ ವ್ಯಾಪಾರ ಕ್ಷೆತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಭಾರತದಲ್ಲೇ ಆರ್ ಎಸ್ ಡೇವಲಪ್ಪರ್ ಕಂಪನಿಯ ವ್ಯಾಪಾರ ವಹಿವಾಟು ಸಂಬಂಧವಾಗಿ ಮಹಿಳೆಯರ ಕ್ಷೆತ್ರದಲ್ಲಿ ಕುಮಾರಿ ಶಶಿಕುಮಾರಿ ರವರಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ತಮಿಳು ಚಿತ್ರರಂಗದ ಹೆಸರಾಂತ ನಟಿ ಶ್ರೇಯ ಶರಣ್ ರವರು ಶಶಿಕುಮಾರಿ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಶಶಿಕುಮಾರಿ ರವರ ತಾಯಿ ಮತ್ತು ಅಣ್ಣ ಅವರ ಜೊತೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು. ಗ್ರಾಮೀಣ ಭಾಗದಿಂದ ತೆರಳಿ ಪಟ್ಟಣದಲ್ಲಿ ಉತ್ತಮ ಸಾಧನೆಗೈದು ರಾಷ್ಟ್ರ ಪ್ರಶಸ್ತಿಗೆ ಬಾಜನರಾಗಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನದ್ದ್ಯಾoತ ಕುಮಾರಿ ಶಶಿಕುಮಾರಿಯ ಸಾಧನೆಗೆ ತಮ್ಮ ಬಂಧುಬಳಗ ಮತ್ತು ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯ ತಿಳಿಸಿದ್ದಾರೆ.

Share This Article
Leave a comment