December 22, 2024

Newsnap Kannada

The World at your finger tips!

mandya , news , politics

ಆಸ್ತಿ ಖರೀದಿಸಿದ 7 ದಿನದಲ್ಲೇ ಖಾತೆ ಬದಲಾವಣೆ ಕಡ್ಡಾಯ : ಸಚಿವ ಆರ್ ಅಶೋಕ್

Spread the love

ರಾಜ್ಯದಲ್ಲಿ ಸ್ಥಿರಾಸ್ತಿ ಮಾರಾಟ ಕ್ರಯ ಪತ್ರ ನೋಂದಣಿಯಾದ 7 ದಿನಗಳೊಳಗೆ ಖರೀದಿದಾರರ ಹೆಸರಿಗೆ ಖಾತೆ ಮತ್ತು ಪಹಣಿ ಬದಲಾವಣೆ ಮಾಡಲು ಸರ್ಕಾರ ಸೂಚಿಸಿದೆ.

ಕಂದಾಯ ಸಚಿವ ಆರ್. ಅಶೋಕ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿ, ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ 34 ದಿನಗಳ ಒಳಗೆ ಖಾತೆ ಬದಲಾವಣೆ ಮಾಡಬೇಕೆಂಬ ನಿಯಮವಿದೆ. ಈ ನಿಯಮ ಪಾಲನೆ ಆಗುತ್ತಿಲ್ಲ. ಇದರಿಂದ ಖರೀದಿದಾರರಿಗೆ ಸಮಸ್ಯೆಯಾಗುತ್ತಿದೆ ಎಂದರು.ನಾಗಮಂಗಲದಲ್ಲಿ ಹಿಂದೂ ಅಪ್ರಾಪ್ತ ಬಾಲಕಿ ಲೌವ್ ಜಿಹಾದ್ ಬಲೆಗೆ – ಮುಸ್ಲಿಂಗೆ ಮತಾಂತರವಾದರೆ ಮದುವೆ

ಖಾತೆ ಆಗದೇ ಹೋದರೆ ಬ್ಯಾಂಕುಗಳಿಂದ ತ್ವರಿತವಾಗಿ ಸಾಲ ಪಡೆಯಲು ಆಗುತ್ತಿಲ್ಲ. ಇದನ್ನು ಪರಿಗಣಿಸಿ ಸ್ಥಿರಾಸ್ತಿ ಮಾರಾಟ ಕ್ರಯ ಪತ್ರಗಳು ನೋಂದಣಿಯಾದ 7 ದಿನಗಳ ಒಳಗೆ ಖಾತೆ ಬದಲಾವಣೆ ಮತ್ತು ಪಹಣಿ ಬದಲಾವಣೆ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!